
–ಸಾಂಕೇತಿಕ ಚಿತ್ರ
ಬೆಂಗಳೂರು: ಬ್ರೆಜಿಲ್ ದೇಶದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿ ಫುಡ್ ಡೆಲಿವರಿ ಹುಡುಗನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಕುಮಾರ್ (22) ಬಂಧಿತ ಆರೋಪಿ.
ಕಿರುಕುಳಕ್ಕೆ ಒಳಗಾದ ವಿದೇಶಿ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿ ಕಾರ್ತಿಕ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಉದ್ಯೋಗ ವೀಸಾದ ಅಡಿ ಎರಡು ತಿಂಗಳ ಹಿಂದೆ ಸಂತ್ರಸ್ತೆ ನಗರಕ್ಕೆ ಬಂದಿದ್ದರು. ಅ.17ರಂದು ಸಂತ್ರಸ್ತೆ ತಮ್ಮ ಮೊಬೈಲ್‌ನಲ್ಲಿ ದಿನಸಿ ವಸ್ತುಗಳಿಗೆ ಆರ್ಡರ್ ಮಾಡಿದ್ದರು. ಅದೇ ದಿನ ಸಂಜೆ ಬುಕ್ ಮಾಡಲಾಗಿದ್ದ ದಿನಸಿ ವಸ್ತುವನ್ನು ಆರೋಪಿ ಡೆಲಿವರಿಗಾಗಿ ಮನೆಯ ಬಾಗಿಲಿಗೆ ಬಂದಿದ್ದ. ಡೆಲಿವರಿ ನೀಡುವಾಗ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ದೇಹದ ಭಾಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.