
ಬೆಂಗಳೂರು: ಕೋರಮಂಗಲದ ಸಂತ ಫ್ರಾನ್ಸಿಸ್ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ಫ್ರಾನ್ಸಿಸ್ ರನ್’ನಲ್ಲಿ 1,300 ಮಂದಿ ಪಾಲ್ಗೊಂಡಿದ್ದರು.
‘ಬದಲಾವಣೆಗಾಗಿ ಓಟ, ಶಕ್ತಿಗಾಗಿ ಓಟ’ ಉದ್ದೇಶದಡಿ ಈ ಓಟವನ್ನು ಆಯೋಜಿಸಲಾಗಿತ್ತು. ಕರ್ನಾಟಕ-1 ಬೆಟಾಲಿಯನ್‌ನ ಎನ್.ಸಿ.ಸಿ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿಜಯ್ ಫೆಡ್ರಿಕ್ಸ್ ಅವರು ಓಟಕ್ಕೆ ಚಾಲನೆ ನೀಡಿದರು. ಈ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ದೇವಂಗಿ, ಪುರುಷರ ವಿಭಾಗದಲ್ಲಿ ಭೀಮಾಶಂಕರ್ ಅವರು ಪ್ರಥಮ ಬಹುಮಾನ ಪಡೆದರು. ಓಟಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ನಿರ್ದೇಶಕರಾದ ಟೈಟಸ್ ಆಂಟೊ, ಎನ್.ಸಿ.ಸಿ ಘಟಕದ ಲೆಫ್ಟಿನೆಂಟ್ ಅಮರೇಗೌಡ ಮತ್ತು ಕಾಲೇಜಿನ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.