ADVERTISEMENT

ಬೆಂಗಳೂರು: ಇನ್ಫೊಸಿಸ್‌ನಿಂದ ಜ. 20ರಿಂದ ಫ್ಯೂಷನ್ ಸಂಗೀತ ನೃತ್ಯೋತ್ಸವ

ಭಾರತೀಯ ವಿದ್ಯಾಭವನ ಸಹಭಾಗಿ– 'ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್' ಮಾಧ್ಯಮ ಸಹಯೋಗ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 14:56 IST
Last Updated 17 ಜನವರಿ 2024, 14:56 IST
<div class="paragraphs"><p>ನೃತ್ಯೋತ್ಸವ</p></div>

ನೃತ್ಯೋತ್ಸವ

   

ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಇನ್ಫೊಸಿಸ್‌ ಪ್ರತಿಷ್ಠಾನ ಜಂಟಿಯಾಗಿ ಇದೇ 20 ರಿಂದ 26ರವರೆಗೆ ’ಫ್ಯೂಷನ್ ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿವೆ.

'ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್' ಮಾಧ್ಯಮ ಸಹಯೋಗದಲ್ಲಿ ಭಾರತೀಯ ವಿದ್ಯಾಭವನದ ‘ಖಿಂಚಾ ಸಭಾಂಗಣ’ದಲ್ಲಿ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಪ್ರತಿ ದಿನ ಸಂಜೆ 6 ರಿಂದ 8ರವರೆಗೆ 75 ವಿಶ್ವವಿಖ್ಯಾತ ಕಲಾವಿದರು 16 ವೈವಿಧ್ಯಮಯ ಪ್ರಕಾರದಲ್ಲಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಾರೆ. ಈ ಪ್ರದರ್ಶನದ ಪ್ರವೇಶ ಸಾರ್ವಜನಿಕರಿಗೆ ಉಚಿತ ಇರಲಿದೆ.

ಕಾರ್ಯಕ್ರಮಗಳ ವಿವರ: 20ರಂದು ಸಂಜೆ 4ಗಂಟೆಗೆ ಜೈಪುರದ ರಘುವೇಂದ್ರ ಮತ್ತು ತಂಡದವರಿಂದ ಬ್ಯಾಗ್ ಪೈಪರ್ ಸಂಗೀತ ಕಾರ್ಯಕ್ರಮ ನಡೆಯಲಿದೆ. 5 ಗಂಟೆಗೆ ಇನ್ಫೊಸಿಸ್‌ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನೀಲ್‌ ಕುಮಾರ್ ಧಾರೇಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನದ ನಿರ್ದೇಶಕಿ ಶ್ರುತಿ ಖುರಾನ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಲೇಖಕ ಮತ್ತು ಆರ್ಥಿಕ ವಿಶ್ಲೇಷಕ ಪದಮ್ ಖಿಂಚ ಅವರು ವಿಶೇಷ ಅತಿಥಿಯಾಗಿ ಭಾಗವಹಿಸುತ್ತಾರೆ. ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ. ಜಿ. ರಾಘವನ್ ಅಧ್ಯಕ್ಷತೆ ವಹಿಸುತ್ತಾರೆ.

ಸಂಜೆ 6 ಗಂಟೆಗೆ  ಫ್ಯೂಷನ್‌ ಸಂಗೀತ: ‘ವಾದ್ಯವೈಭವ’ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ಮತ್ತು ತಂಡ - ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ. 7 ಗಂಟೆಗೆ ಮಧುಲಿಯಾ ಮಹಾಪಾತ್ರ, ಸಹನಾ ಆರ್. ಮಯ್ಯ, ಕೃಷ್ಣಮೂರ್ತಿ ತುಂಗಾ ಮತ್ತು ಚಿತ್ಕಲಾ ಕೆ. ತುಂಗಾ ಅವರಿಂದ `ಮೋಡಿ ಮಾಡುವ ಒಡಿಸ್ಸಿ ಯಕ್ಷಗಾನ’ ನಡೆಯಲಿದೆ.

21ರಂದು ಸಂಜೆ 6ಕ್ಕೆ ಸಂಗೀತಗಾರ ಪ್ರವೀಣ್ ಡಿ. ರಾವ್ ಅವರ ತಂಡದಿಂದ `ಚಕ್ರಫೋನಿಕ್ಸ್ ಟ್ರಿಯೋ’ ಸಂಗೀತ ಮತ್ತು 7ಕ್ಕೆ ಮಧು ನಟರಾಜ್ ತಂಡದಿಂದ `ಪಾಲಿಂಫ್ಸೆಟ್ ಅಂಡ್ ಸಂಯೋಗ್’ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

22ರಂದು ಸಂಜೆ 6ಕ್ಕೆ ರಾಘವೇಂದ್ರ ಹೆಗಡೆ ಮತ್ತು ವಿದ್ವಾನ್ ಮೌನ ರಾಮಚಂದ್ರ ಆವರ `ಮರಳಿನ ಮಾಧುರ್ಯ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ವಿದುಷಿ ಸಂಧ್ಯಾ ಉಡುಪ ಮತ್ತು ತಂಡದಿಂದ ‘ನವರಾತ್ರಿ ನೃತ್ಯ’ ಕಾರ್ಯಕ್ರಮ ಆಯೋಜಿಸಲಾಗಿದೆ.

23ರಂದು ಸಂಜೆ 6ಕ್ಕೆ ‘ಮಿಸ್ಟಿಕ್‌ ವೈಬ್ಸ್‘: ವಿದ್ವಾನ್ ಅಮಿತ್ ನಾಡಿಗ್ ಅವರ ಕೊಳಲು ವಾದನದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ `ಸಖಿ’ (ನಮ್ಮೊಳಗಿನ ಸಖಿತ್ವದ ಹುಡುಕಾಟ) ನೃತ್ಯಕಾರ್ಯಕ್ರಮವನ್ನು ವಿದುಷಿ ಚಿತ್ರಾ ಅರವಿಂದ್ ಮತ್ತು ತಂಡ ಪ್ರಸ್ತುತಪಡಿಸಲಿದೆ.

24ರಂದು ಸಂಜೆ 6ಕ್ಕೆ ವಿದ್ವಾನ್ ರವೀಂದ್ರ ಕಾಟೋಟಿ ಮತ್ತು ತಂಡ `ಧಾತ್ರಿ’ - ಹಿಂದೂಸ್ತಾನಿ ಫ್ಯೂಷನ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 7ಕ್ಕೆ `ವಿ ಮೂವ್ ಥಿಯೇಟರ್’ ತಂಡದ ಅಭಿಷೇಕ್ ಅಯ್ಯಂಗಾರ್ ಅವರು ರಚಿಸಿ ನಿರ್ದೇಶಿಸಿರುವ `ಬೈ ಟು ಕಾಫಿ’ ನಾಟಕ ಪ್ರದರ್ಶನವಿದೆ.

25ರಂದು ಸಂಜೆ 6 ಕ್ಕೆ ವಿದ್ವಾನ್‌ ಕೆ. ಜಿ. ದಿಲೀಪ್ ಅವರು `ಲಾಕ್ಷ್ಯಾ ಕ್ವಾರ್ಟೇಟ್’ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 7ಕ್ಕೆ ವಿದುಷಿ ವಿದ್ಯಾ ಅಂಗಾರ ಮತ್ತು ತಂಡದಿಂದ `ಸಂಯಾನ': ಜಯದೇವ ಗೀತಗೋವಿಂದ ಕೂಚುಪುಡಿ, ಒಡಿಸ್ಸಿ, ಭರತನಾಟ್ಯದ ಅಷ್ಟಪದಿ ನೃತ್ಯ ಕಾರ್ಯಕ್ರಮ ನಡೆಯಲಿದೆ.

26ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ. ಸಂಗೀತಗಾರ ಪ್ರವೀಣ್ ಡಿ. ರಾವ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿದ್ಯಾಭವನದ ಉಪಾಧ್ಯಕ್ಷ ಚಿರಂಜೀವಿ ಸಿಂಘ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಸಂಜೆ 7ಕ್ಕೆ ಪ್ರವೀಣ್ ಗೋಡ್ಖಿಂಡಿ ಅವರು ‘ರಾಗ ರಂಗ್’ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಸಂಗೀತ - ನೃತ್ಯ ಕಾರ್ಯಕ್ರಮಗಳ ಜೊತೆ ಪ್ರತಿ ದಿನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.