ಜಿ. ಪರಮೇಶ್ವರ
ಬೆಂಗಳೂರು: ‘ಮಳೆಯ ನೀರು ನೆಲದಲ್ಲೇ ಹರಿಯಬೇಕು , ಅದನ್ನು ಆಕಾಶಕ್ಕೆ ವಾಪಸು ಕಳುಹಿಸಲು ಆಗುತ್ತದೆಯೇ’ ಎಂದು ಗೃಹಸಚಿವ ಜಿ. ಪರಮೇಶ್ವರ ಪ್ರಶ್ನಿಸಿದ್ದಾರೆ.
'ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಸೃಷ್ಟಿ ಆಗಿದೆಯಲ್ಲ’ ಎಂದು ಬುಧವಾರ ಸುದ್ದಿಗಾರರು ಗಮನಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.
'ಎಂತಹ ಸುಸಜ್ಜಿತ ನಗರವಾದರೂ ಇಂತಹ ಮಳೆಗೆ ಅಸ್ತವ್ಯಸ್ಥವಾಗಲಿದೆ. ನಗರದಲ್ಲಿ ಅಕ್ಟೋಬರ್‌ನಲ್ಲಿ ಹೀಗೆ ಮಳೆ ಆಗಿರುವುದು ಆಶ್ಚರ್ಯಕರ. ಹೀಗಾಗಿ ಅಸ್ತವ್ಯಸ್ಥವಾಗಿದೆ. ನ್ಯೂಯಾರ್ಕ್, ಲಂಡನ್‌ನಲ್ಲಿ ಇಂತಹ ಮಳೆ ಬಂದಾಗಲೂ ಹೀಗೆ ಆಗುತ್ತದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.