ADVERTISEMENT

ಬೆಂಗಳೂರು | ಗಾಂಜಾ ಮಿಶ್ರಿತ ಜೆಲ್ಲಿ ಮಾರಾಟ: ಆರೋಪಿಗಳ ಬಂಧನ

ಬ್ಯಾಟರಾಯನಪುರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 14:33 IST
Last Updated 25 ಜೂನ್ 2025, 14:33 IST
ಇಸ್ಮಾಯಿಲ್‌
ಇಸ್ಮಾಯಿಲ್‌   

ಬೆಂಗಳೂರು: ಗಾಂಜಾ ಮಿಶ್ರಿತ ಜೆಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಇಂದಿರಾನಗರದ ನಿವಾಸಿಗಳಾದ ಟಿ.ಎಸ್‌.ಮೊಹಮ್ಮದ್‌ ಜಾಹಿದ್‌ (25) ಹಾಗೂ ಇಸ್ಮೈಲ್‌ ಅದ್ನಾನ್‌ (24) ಬಂಧಿತರು.

ಆರೋಪಿಗಳಿಂದ ₹3 ಲಕ್ಷ ಮೌಲ್ಯದ ಒಂದು ಕೆ.ಜಿ 440 ಗ್ರಾಂ ಗಾಂಜಾ ಮಿಶ್ರಿತ ಜೆಲ್ಲಿ ಪೊಟ್ಟಣಗಳು, ₹50 ಸಾವಿರ ನಗದು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಆರೋಪಿಗಳಿಬ್ಬರೂ ಹೆಬ್ಬಾಳದ ಮುನಿಯಪ್ಪ ಲೇಔಟ್‌ನಲ್ಲಿ ನೆಲಸಿದ್ದರು.

‘ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಯಪ್ಪ ಲೇಔಟ್‌ನಲ್ಲಿ ಗಾಂಜಾ ಮಿಶ್ರಿತ ಜೆಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆರೋಪಿಗಳು ಎಲ್ಲಿಂದ ಗಾಂಜಾ ಮಿಶ್ರಿತ ಜೆಲ್ಲಿ ಖರೀದಿಸಿ ತರುತ್ತಿದ್ದರು? ಅದನ್ನು ಎಲ್ಲಿ ಪೊಟ್ಟಣ ಮಾಡಲಾಗುತ್ತಿತ್ತು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.