ADVERTISEMENT

ನೆಲಮಂಗಲ: ರಸ್ತೆ ಬದಿ ಕಸ ಎಸೆದ ವಿಚಾರಕ್ಕೆ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:37 IST
Last Updated 9 ಆಗಸ್ಟ್ 2024, 15:37 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ನೆಲಮಂಗಲ: ಮಾದನಾಯಕನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ವೃದ್ದರೊಬ್ಬರ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ADVERTISEMENT

ಮಾದನಾಯಕನಹಳ್ಳಿ ನಿವಾಸಿ ಸಿದ್ದಪ್ಪ(70) ಕೊಲೆಯಾದವರು.

ಕೃತ್ಯ ಎಸಗಿದ ಆರೋಪದ ಅಡಿ ಶಿರಾದ ಪುನೀತ್‌(22) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದ‍ಪ್ಪ, ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅವರಿಗೆ ಗುಟ್ಕಾ ಜಗಿಯುವ ಅಭ್ಯಾಸ ಇತ್ತು. ಗುಟ್ಕಾ ಜಗಿದ ಮೇಲೆ ರಸ್ತೆಯಲ್ಲಿ ಉಗುಳುತ್ತಿದ್ದರು. ಅಲ್ಲದೇ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದರು ಎನ್ನಲಾಗಿದೆ.

ವಶಕ್ಕೆ ಪಡೆದ ವ್ಯಕ್ತಿ ಹಾಗೂ ಕೊಲೆಯಾದ ವೃದ್ಧ ಅಕ್ಕ‍ಪಕ್ಕದ ನಿವಾಸಿಗಳು. ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗಿಯುತ್ತಿದ್ದರು ಹಾಗೂ ಕಸ ಎಸೆಯುತ್ತಿದ್ದರು ಎನ್ನುವ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಬೆಳಿಗ್ಗೆಯೂ ಗಲಾಟೆ ನಡೆದು, ಕೊಲೆ ಮಾಡಲಾಗಿದೆ ಎಂಬ ಆರೋಪವಿದೆ.

‘ಸಿಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯ ಎಸಗಿದ್ದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಲಭಿಸಿದರೆ ಆರೋಪಿಯನ್ನು ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.