
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದಲ್ಲಿ ಕಸ ಗುಡಿಸುವ 46 ಯಂತ್ರಗಳನ್ನು ಏಳು ವರ್ಷಗಳ ಕಾಲ ಬಾಡಿಗೆ ಆಧಾರದ ಮೇಲೆ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಬಾಡಿಗೆ ನೆಪದಲ್ಲಿ ಕಮಿಷನ್ ಗೋಲ್‌ಮಾಲ್ ನಡೆದಿದೆ. ಜಿಬಿಎ ಯಾರ್ಡ್‌ಗಳಲ್ಲಿ ಕಸ ಗುಡಿಸುವ 26 ಯಂತ್ರಗಳು ಬಳಕೆಯಾಗದೆ ಬಿದ್ದಿವೆ. ಆದರೂ ಸರ್ಕಾರ ₹613 ಕೋಟಿ ಖರ್ಚು ಮಾಡಿ, 46 ವಾಹನಗಳನ್ನು ಬಾಡಿಗೆಗೆ ಪಡೆಯಲು ಹೊರಟಿದೆ. ಇದರ ಬದಲು ಯಂತ್ರಗಳನ್ನು ಖರೀದಿಸಿದರೆ ಕಡಿಮೆ ವೆಚ್ಚವಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.