ADVERTISEMENT

ಒಣಕಸ ವಿಂಗಡಣೆಗೆ ನೆದರ್ಲೆಂಡ್ಸ್‌ ನೆರವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
   

ಬೆಂಗಳೂರು ಸೌಂದರ್ಯ ಮತ್ತು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಒಣಕಸ ಸಮಸ್ಯೆ ಪರಿಹಾರವಾಗಿ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿರುವ 10 ಒಣ ಕಸ ಸಂಗ್ರಹ ಘಟಕಗಳಲ್ಲಿ ಶೀಘ್ರದಲ್ಲಿಯೇ ಸ್ಮಾರ್ಟ್‌ ತಂತ್ರಜ್ಞಾನ ಅಳವಡಿಸಲಿದೆ.

ಇದಕ್ಕಾಗಿ ಬಿಬಿಎಂಪಿಯುವೈಜ್ಞಾನಿಕವಾಗಿ ಕಸ ವಿಂಗಡಣೆಯಲ್ಲಿ ಪರಿಣಿತಿ ಸಾಧಿಸಿರುವ ಸ್ವೀಪ್‌ಸ್ಮಾರ್ಟ್‌ ಎಂಬನೆದರ್ಲೆಂಡ್ಸ್‌ ಮೂಲದ ಕಂಪನಿಯ ಜತೆ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಮರಿಯಪ್ಪನಪಾಳ್ಯ, ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಹಿಂಬದಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿಯ ಘಟಕ ಸೇರಿದಂತೆ ಬಿಬಿಎಂಪಿಯ ಹತ್ತು ಒಣಕಸ ಘಟಕಗಳಲ್ಲಿಕಸ ವಿಂಗಡಣೆಗೆ ಯಂತ್ರ ಅಳವಡಿಸಲಾಗುವುದು. ನೆದರ್ಲೆಂಡ್ಸ್‌ ಕಂಪನಿ ಈ ಘಟಕಗಳ ತಂತ್ರಜ್ಞಾನ ಮತ್ತು ವಿನ್ಯಾಸದ ಹೊಣೆ ಹೊತ್ತಿದೆ.

ADVERTISEMENT

ಇದೇ ಮೇ ತಿಂಗಳಲ್ಲಿ ನಗರಕ್ಕೆ ಬಂದಿದ್ದ ನೆದರ್ಲೆಂಡ್ಸ್‌ ಅಧಿಕಾರಿಗಳು ಮತ್ತು ಸ್ವೀಪ್‌ಸ್ಮಾರ್ಟ್‌ ಕಂಪನಿಯ ಅಧಿಕಾರಿಗಳು ಕಸ ವಿಂಗಡಣೆ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.

2016ರಲ್ಲಿ ಕಸ ವಿಂಗಡಣೆ ಕಡ್ಡಾಯ ಮಾಡಲಾಗಿದ್ದು, ಅಂದಿನಿಂದ ಕಸ ವಿಂಗಡಣೆ ಘಟಕಗಳ ಸಂಖ್ಯೆ ಹೆಚ್ಚುತ್ತಿದೆ. ಈ ಘಟಕಗಳಲ್ಲಿ ಸಿಬ್ಬಂದಿಯೇ ಕಸವನ್ನು ವಿಂಗಡಿಸುತ್ತಿದ್ದಾರೆ. ಕಾಗದ, ಪ್ಲಾಸ್ಟಿಕ್‌, ಕಬ್ಬಿಣ ಸೇರಿದಂತೆ 38 ಬಗೆಯ ಒಣಕಸವನ್ನುಕಾರ್ಮಿಕರು ಬೇರ್ಪಡಿಸುತ್ತಿದ್ದರು. ಹೊಸ ತಂತ್ರಜ್ಞಾನ ಅಳವಡಿಸಿದರೆ ಯಂತ್ರಗಳೇ ಈ ಕೆಲಸ ಮಾಡಲಿವೆ.

ಈ ಯಂತ್ರಗಳನ್ನು ಅಳವಡಿಸಲು ಘಟಕಗಳಲ್ಲಿ ವಿಶಾಲವಾದ ಜಾಗ ಬೇಕಾಗಿಲ್ಲ. ಅತ್ಯಂತ ಕಡಿಮೆ ಸ್ಥಳದಲ್ಲಿ ಈ ಯಂತ್ರಗಳನ್ನು ಒಂದರ ಮೇಲೊಂದರಂತೆ ಜೋಡಿಸಬಹುದು.ಕನ್ವೇಯರ್‌ ಬೆಲ್ಟ್‌ ಮೂಲಕ ಅತ್ಯಂತ ವೇಗವಾಗಿ ಕಸವನ್ನು ಬೇರ್ಪಡಿಸುವ ಯಂತ್ರಗಳು ಕಾರ್ಮಿಕರ ಕೆಲಸ ಸುಲಭಗೊಳಿಸಲಿವೆ.

ನಗರಕ್ಕೆ ಭೇಟಿ ನೀಡಿದ್ದ ನೆದರ್ಲೆಂಡ್ಸ್‌ ತಂಡ

ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಕೆಲವು ತಿಂಗಳ ಹಿಂದೆ ನಗರಕ್ಕೆ ಭೇಟಿ ನೀಡಿದ್ದನೆದರ್ಲೆಂಡ್ಸ್‌ ಸರ್ಕಾರದ ಒಂದು ತಂಡ ಅಧ್ಯಯನ ನಡೆಸಿ, ಹಿಂದಿರುಗಿತ್ತು.ಈ ಯೋಜನೆಯಶೇ 15ರಷ್ಟು ವೆಚ್ಚವನ್ನು ನೆದರ್ಲೆಂಡ್ಸ್‌ ಸರ್ಕಾರ ಮತ್ತು ಶೇ 35ರಷ್ಟು ವೆಚ್ಚವನ್ನು ಸ್ವಚ್ಛ ಭಾರತ ಸೆಸ್‌ನಿಂದ ಭರಿಸಲಾಗುವುದು. ಇನ್ನುಳಿದ ಶೇ 50ಷ್ಟು ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ.

* ಹತ್ತು ಘಟಕಗಳನ್ನು ಹೊರತುಪಡಿಸಿ ಇನ್ನುಳಿದ ಒಣಕಸ ವಿಂಗಡಣಾ ಘಟಕಗಳನ್ನು ಕೂಡ ₹40 ಲಕ್ಷ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಯಂತ್ರಗಳನ್ನು ಅಳವಡಿಸಿದರೆ ಒಂದು ದಿನಕ್ಕೆ ಕಸ ವಿಂಗಡಣೆ ಕೆಲಸ ಮೂರರಿಂದ ನಾಲ್ಕು ಪಟ್ಟು ಹೆಚ್ಚಲಿದೆ.

- ಬಿಬಿಎಂಪಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.