
ಪ್ರಜಾವಾಣಿ ವಾರ್ತೆ
ಬೆಂಗಳೂರು: ಚೊಕ್ಕಸಂದ್ರದ ಬಾಡಿಗೆ ಕೊಠಡಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಹಾರದ ಮೊಹಮ್ಮದ್ ಹುಸೈನ್ (21), ಮುಜಾಪುರ ಹುಸೈನ್ ((19), ಅರ್ಬಾಜ್ ಆಲಂ (26), ರೋಹಿತ್ ಚೌಧರಿ (20) ಹಾಗೂ ಅನ್ಬುರಾಜ್ ಕುಮಾರ್ ಅವರು ಗಾಯಗೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಬಿಹಾರದ ಐವರು ಕಾರ್ಮಿಕರು ಕೆಲವು ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಧರ್ಮಪಾಲ ಎಂಬುವವರ ಬಳಿ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ಧರ್ಮಪಾಲ ಅವರೇ ಚೊಕ್ಕಸಂದ್ರದಲ್ಲಿ ಒಂದು ಬಾಡಿಗೆ ಕೊಠಡಿಯನ್ನು ಕೊಡಿಸಿದ್ದರು. ಧರ್ಮಪಾಲ ಅವರು ಅಡುಗೆ ಅನಿಲದ ಸಿಲಿಂಡರ್, ಸ್ಟೌ ಒದಗಿಸಿದ್ದರು. ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಅರಿಯದೇ ಶುಕ್ರವಾರ ಬೆಳಿಗ್ಗೆ ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅಗ್ನಿ ಅವಘಡ ಸಂಭವಿಸಿದೆ’ ಎಂದು ಮೂಲಗಳು ಹೇಳಿವೆ.
‘ಅರ್ಬಾಜ್ ಆಲಂ ಕಡೆಯಿಂದ ಧರ್ಮರಾಜ್ ಅವರು ಕೆಲಸಕ್ಕೆ ಕರೆಸಿಕೊಂಡಿದ್ದರು. ಅವರು ಕಳಪೆ ಗುಣಮಟ್ಟದ ಸಲಕರಣೆ ನೀಡಿದ್ದರ ಪರಿಣಾಮ ಅಗ್ನಿ ಅವಘಡ ಸಂಭವಿಸಿದೆ’ ಎಂದು ಅನ್ಬುರಾಜ್ ಕುಮಾರ್ ಅವರು ದೂರು ನೀಡಿದ್ದಾರೆ.
ಧರ್ಮಪಾಲ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.