ADVERTISEMENT

ಗೌರಿ–ಗಣೇಶ ಮತ್ತು ಈದ್ ಮಿಲಾದ್ ಮೆರವಣಿಗೆ: ಕಮಾಂಡ್ ಸೆಂಟರ್‌ನಿಂದಲೇ ನಿಗಾ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 16:18 IST
Last Updated 26 ಆಗಸ್ಟ್ 2025, 16:18 IST
   

ಬೆಂಗಳೂರು: ಗೌರಿ–ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಬಂದೋಬಸ್ತ್‌ಗಾಗಿ ನಗರಕ್ಕೆ ಕೇಂದ್ರದಿಂದ ಎರಡು ಕ್ಷಿಪ್ರ ಕಾರ್ಯ ಪಡೆಗಳನ್ನು ಕರೆಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್ ಸಿಂಗ್ ಅವರು ಹೇಳಿದರು.

ಆರ್‌ಎಎಫ್‌ ಹಾಗೂ ಪೊಲೀಸರ ಜತೆ ಪಥಸಂಚಲನ ನಡೆಸಲಿವೆ. ನಗರದ ವಿವಿಧ ಕಡೆಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಆರ್‌ಎಎಫ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು ಮಾಹಿತಿ ನೀಡಿದರು.

‘ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಕೆಲವು ಸಲಹೆ, ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಆಗಸ್ಟ್‌ 29ರಿಂದ ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಸೂಕ್ತ ಬಂದೋಬಸ್ತ್ ಮಾಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಈ ಬಾರಿ ಗಣೇಶ ಮೂರ್ತಿಗಳ ಮೆರವಣಿಯನ್ನು ಕಮಾಂಡ್ ಸೆಂಟರ್‌ನಿಂದಲೇ ಗಮನಿಸುತ್ತೇವೆ. ಮೆರವಣಿಗೆ ತೆರಳುವ ಮಾರ್ಗದ ರಸ್ತೆಗಳಲ್ಲಿ ಕಮಾಂಡ್ ಸೆಂಟರ್ ಕೇಂದ್ರೀಕರಿಸಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವ ಯಾವ ರಸ್ತೆಗಳಲ್ಲಿ ಮೆರವಣಿಗೆ ಹೋಗುತ್ತದೆಯೋ ಅಲ್ಲಿನ ಸಿಬ್ಬಂದಿ ಸಹ ಖುದ್ದು ಕಮಾಂಡ್ ಸೆಂಟರ್‌ನಲ್ಲಿದ್ದು ಗಮನಿಸುತ್ತಾರೆ’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.