ADVERTISEMENT

ತೆರಿಗೆ ಬಾಕಿ: ಜಿಬಿಎ ವ್ಯಾಪ್ತಿಯಲ್ಲಿ 7 ಸಾವಿರ ಆಸ್ತಿಗಳ ಹರಾಜಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 18:30 IST
Last Updated 2 ಫೆಬ್ರುವರಿ 2026, 18:30 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ  ಏಳು ಸಾವಿರ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.

ಆಸ್ತಿ ತೆರಿಗೆ, ಸೆಸ್‌, ಬಡ್ಡಿ, ದಂಡ ಹಾಗೂ ಘನತ್ಯಾಜ್ಯ ಸೆಸ್‌, ಬಳಕೆದಾರರ ಶುಲ್ಕ ಸೇರಿ ₹437 ಕೋಟಿ ಬಾಕಿ ಉಳಿದಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ಬೇಡಿಕೆ ನೋಟಿಸ್‌ ಕಳುಹಿಸಲಾಗಿತ್ತು. ಆದರೂ, ತೆರಿಗೆ ಪಾವತಿಸದೆ ಇರುವುದರಿಂದ, ಮುಂದಿನ ಕ್ರಮವಾಗಿ ಜಪ್ತಿ ಆದೇಶ ಹೊರಡಿಸಲಾಗಿದೆ ಎಂದು ಜಿಬಿಎ ಕಂದಾಯ ವಿಭಾಗದ ಪ್ರಕಟಣೆ ತಿಳಿಸಿದೆ.

ADVERTISEMENT

ಜಪ್ತಿ ಆದೇಶ ಹೊರಡಿಸಿದ ಬಳಿಕವೂ ತೆರಿಗೆ ಪಾವತಿ ಆಗದಿರುವುದರಿಂದ ಈ ಆಸ್ತಿಗಳನ್ನು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಫೆ.17ರಂದು ಹರಾಜಿಗೆ ದಿನ ನಿಗದಿಪಡಿಸಲಾಗಿದೆ. ಹರಾಜಿಗೆ ಸಂಬಂಧಿಸಿದ ನೋಟಿಸ್‌ಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಿತ ಆಸ್ತಿ ಮಾಲೀಕರು ತಕ್ಷಣವೇ https://BBMPTax.karnataka.gov.in ಮೂಲಕ ಆನ್‌ಲೈನ್ ಪಾವತಿ ಮಾಡಿದಲ್ಲಿ, ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಉದ್ದಿಮೆ ಪರವಾನಗಿ: ಉದ್ದಿಮೆದಾರರು ತಮ್ಮ ಅನುಕೂಲದ ಅನ್ವಯ ಒಂದರಿಂದ ಐದು ಆರ್ಥಿಕ ವರ್ಷಗಳ ಅವಧಿಗೆ ಆನ್‌ಲೈನ್‌ನಲ್ಲಿ ಉದ್ದಿಮೆ ಪರವಾನಗಿಯನ್ನು ದಂಡ ಶುಲ್ಕವಿಲ್ಲದೆ ಫೆ.28ರೊಳಗೆ ಪಡೆದುಕೊಳ್ಳಬಹುದು.

ಕಳೆದ ಸಾಲಿನಂತೆ ಉದ್ದಿಮೆ ಪರವಾನಗಿ ಶುಲ್ಕವನ್ನು ಆನ್‌ಲೈನ್ ಮುಖಾಂತರ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಪಾವತಿಸಬಹುದು. ಮಾರ್ಚ್‌ 1ರಿಂದ 31ರವರೆಗೆ ಪರವಾನಗಿ ನವೀಕರಣ ಶುಲ್ಕದ ಶೇಕಡ 25ರಷ್ಟು ದಂಡ ಮೊತ್ತ ಪಾವತಿಸಬೇಕಾಗುತ್ತದೆ. ಏಪ‍್ರಿಲ್‌ 1ರಿಂದ ಪರವಾನಗಿ ಶುಲ್ಕದ ಶೇಕಡ 100ರಷ್ಟು ದಂಡದ ಮೊತ್ತ ಪಾವತಿಸಬೇಕಾಗುತ್ತದೆ.

ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.