ADVERTISEMENT

ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 20:48 IST
Last Updated 1 ಜನವರಿ 2026, 20:48 IST
<div class="paragraphs"><p>ಸಿ. ನಾಗಣ್ಣ</p></div>

ಸಿ. ನಾಗಣ್ಣ

   

ಬೆಂಗಳೂರು: ಭೂ ವಿಜ್ಞಾನಿ, ಜಯನಗರ 5ನೇ ಬ್ಲಾಕ್‌ ನಿವಾಸಿ ಸಿ. ನಾಗಣ್ಣ (96) ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. 

ಮೈಸೂರು ವಿಶ್ವವಿದ್ಯಾಲಯ
ದಲ್ಲಿ ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಜೆಕ್ ರಿಪಬ್ಲಿಕ್ ದೇಶದಲ್ಲಿ ಪಿಎಚ್.ಡಿ ಮಾಡಿದ್ದರು. 1969ರಲ್ಲಿ ಅಪೋಲೋ 9 ನೌಕೆ ಹೊತ್ತು ತಂದಿದ್ದ ಚಂದ್ರನ ಬೆಸಾಲ್ಟ್ ಶಿಲೆಗಳ (ಅಗ್ನಿಶಿಲೆ) ಅಧ್ಯಯನಕ್ಕೆ ನಾಸಾ ಸಂಸ್ಥೆ ಆರಿಸಿದ ಭೂ ವಿಜ್ಞಾನಿಗಳಲ್ಲಿ ನಾಗಣ್ಣ ಅವರೂ
ಒಬ್ಬರಾಗಿದ್ದರು.

ADVERTISEMENT

ಭಾರತದಲ್ಲಿ ಮೊದಲ ಬಾರಿಗೆ ಜಲಭೂವಿಜ್ಞಾನ ವಿಷಯದಲ್ಲಿ ಎಂ.ಟೆಕ್‌ ಪರಿಚಯಿಸಿದ್ದರು. ಸೇಂಟ್‌ ಮೇರಿ ದ್ವೀಪದಲ್ಲಿ ಜ್ವಾಲಾಮುಖಿಯಿಂದ ಉಂಟಾಗಿರುವ ವಿಶಿಷ್ಟ ಬಂಡೆಗಳತ್ತ ಭೂವಿಜ್ಞಾನಿಗಳನ್ನು ಸೆಳೆದಿದ್ದರು. ಭಾರತೀಯ ಖನಿಜ ವಿಜ್ಞಾನ ಸಂಘದ ಅಧ್ಯಕ್ಷರಾಗಿ 20 ವರ್ಷ ಕಾರ್ಯ ನಿರ್ವಹಿಸಿ
ದ್ದರು. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಮತ್ತು ಕೃಷ್ಣದೇವರಾಯ ವಿಶ್ವ
ವಿದ್ಯಾಲಯದ ನಂದಿಹಳ್ಳಿ ಕ್ಯಾಂಪಸ್‌ನಲ್ಲಿ ಭೂಗೋಳ ಮತ್ತು ಪರಿಸರ ವಿಜ್ಞಾನ ವಿಭಾಗ ಸ್ಥಾಪಿಸಿದ್ದರು. ಬೆಂಗಳೂರು ವಿ.ವಿಯಲ್ಲಿ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ 24 ವರ್ಷ ಕೆಲಸ ಮಾಡಿದ್ದರು. ಜಕೊಸ್ಲೊವಾಕಿಯಾದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಗೌರವ ಫೆಲೋ ಆಗಿದ್ದರು. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2014ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ಮೃತರ ಅಂತ್ಯ ಸಂಸ್ಕಾರ ಶುಕ್ರವಾರ (ಜ.2) ಮಧ್ಯಾಹ್ನ 12ಕ್ಕೆ ಅವರ ಸ್ವಂತ ಊರಾದ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.