
ಯಲಹಂಕ: ಹಳೇನಗರದ ನಗರ್ತರ ಪೇಟೆ ಬ್ರಾಹ್ಮಣರ ಬೀದಿಯಲ್ಲಿರುವ ಪುರಾತನ ನಗರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ‘ಗಿರಿಜಾ ಕಲ್ಯಾಣೋತ್ಸವʼ ನೆರವೇರಿತು.
ಬೆಳಗ್ಗೆಯಿಂದಲೇ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿ ವಿವಿಧ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೆಳಿಗ್ಗೆ 10ಕ್ಕೆ ಪ್ರಾರಂಭವಾದ ಕಲ್ಯಾಣೋತ್ಸವ, ಮಧ್ಯಾಹ್ನ 3ಕ್ಕೆ ಮುಕ್ತಾಯವಾಯಿತು. ಸಂಜೆ ಶಿವ-ಪಾರ್ವತಿ ದೇವರ ಮೂರ್ತಿಗಳನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು. ಸೋಮವಾರ ಬೆಳಿಗ್ಗೆ 9ರಿಂದ ಸಂಜೆಯವರೆಗೂ ಪ್ರಸಾದ ವಿತಸಲಾಯಿತು.
ನಗರೇಶ್ವರ ಸ್ವಾಮಿ ದೇವಸ್ಥಾನ ಭಕ್ತ ಮಂಡಳಿಯ ಪುರುಷೋತ್ತಮ್ ಸ್ವಾಮಿ, ಗೋಪಾಲ್, ಸತ್ಯನಾರಾಯಣ ಸಂಗಮೇಶ್ವರ್, ಮಂಜುನಾಥ್, ಭಾಸ್ಕರ್, ವಿಜಯಕುಮಾರ್, ಭಾರ್ಗವ್, ಅಪ್ಪಿ, ಕಾರಂತರು, ಮನೋಹರ್, ಶಮಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.