ADVERTISEMENT

ಮಲಬಾರ್‌ ಗೋಲ್ಡ್–ಆಭರಣ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:49 IST
Last Updated 13 ಜುಲೈ 2019, 19:49 IST
ಮಲಬಾರ್‌ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನ ಕೋರಮಂಗಲದ ಮಳಿಗೆಯಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಭಾನುವಾರ ಆರಂಭವಾಯಿತು
ಮಲಬಾರ್‌ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನ ಕೋರಮಂಗಲದ ಮಳಿಗೆಯಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಭಾನುವಾರ ಆರಂಭವಾಯಿತು   

ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ನ ಕೋರಮಂಗಲದ ಮಳಿಗೆಯಲ್ಲಿ ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಜುಲೈ 21ರ ವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನ ಉಪ ಬ್ರಾಂಡ್‌ಗಳಾದ ಮೈನ್ ವಜ್ರಾಭರಣ, ಇಆರ್‌ಎ ಕತ್ತರಿಸಿದ ವಜ್ರದ ಆಭರಣಗಳು, ಭಾರತೀಯ ದೈವಿಕ ಪರಂಪರೆಯ ಆಭರಣಗಳು, ದೇಸಿ ಶೈಲಿಯ ಕರಕುಶಲ ಆಭರಣಗಳು, ಪ್ರೆಸಿಯಾದ ಅಮೂಲ್ಯ ರತ್ನದ ಆಭರಣಗಳು ಮತ್ತು ಸ್ಟಾರ್ಲೆಟ್ ಮಕ್ಕಳ ಆಭರಣಗಳು ಲಭ್ಯ. ನುರಿತ ಕುಶಲಕರ್ಮಿಗಳು ಚಿನ್ನ, ವಜ್ರ ಮತ್ತು ರತ್ನಗಳಿಂದ ತಯಾರಿಸಿದ ವಿವಿಧ ವಿನ್ಯಾಸಗಳ ಆಯ್ಕೆಗೆ ಅಪೂರ್ವ ಅವಕಾಶ ಇಲ್ಲಿದೆ.

ಇಲ್ಲಿ ಖರೀದಿಸುವ ಚಿನ್ನದ ಆಭರಣಗಳಿಗೆ ಮಜೂರಿಯಲ್ಲಿಶೇ 50 ರಷ್ಟು ಮತ್ತು ವಜ್ರದ ಮೌಲ್ಯದ ಮೇಲೆ ಶೇ 20ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.