ಬೆಂಗಳೂರು: ಬಸ್ಸಿನ ಲಗೇಜ್ ಕ್ಯಾರಿಯರ್‌ನಲ್ಲಿ ಇಟ್ಟಿದ್ದ ಬ್ಯಾಗಿನಿಂದ ₹ 3.60 ಲಕ್ಷ ಮೌಲ್ಯದ 140 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಿರುಪತಿಯಲ್ಲಿರುವ ಎನ್‌ಆರ್‌ಐ ಅಕಾಡೆಮಿ ಶಾಲೆಯ ಶಿಕ್ಷಕ, ಆಂಧ್ರಪ್ರದೇಶದ ಚಿತ್ತೂರು ನಿವಾಸಿ, ಸರ್ದಾರ್ ಅಲಿ ಚಿನ್ನಾಭರಣ ಕಳೆದುಕೊಂಡವರು.ಈ ಬಗ್ಗೆ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಪತ್ನಿ ಮತ್ತು ಮಕ್ಕಳ ಜೊತೆ ತಿರುಪತಿಗೆ ಹೋಗುವ ಬಸ್ಸು ಹತ್ತಿದ್ದ ನಾನು, ನಾಲ್ಕು ಚಿನ್ನದ ಬಳೆ, ಒಂದು ಚಿನ್ನದ ಮಂಗಲಸೂತ್ರ ಮತ್ತು ಡಾಲರ್, ಮೂರು ಜೊತೆ ಕಿವಿಯೋಲೆ, ಒಂದು ಲಾಂಗ್ ನೆಕ್ಲೇಸ್, ಒಂದು ರೂಬಿ ಸೆಟ್, ಎರಡು ಚಿನ್ನದ ಸರ ಮತ್ತು ಡಾಲರ್‌ಗಳು, ಮಗುವಿನ ಎರಡು ಬಳೆಗಳು, ವಜ್ರ ಖಚಿತ ಎರಡು ಚಿನ್ನದ ಉಂಗುರಗಳು ಸೇರಿ ಒಟ್ಟು 140 ಗ್ರಾಂ ತೂಕದ ಚಿನ್ನಾಭರಣ ಇದ್ದ ಬ್ಯಾಗನ್ನು ಬಸ್ಸಿನ ಲಗೇಜ್ ಕ್ಯಾರಿಯರ್‌ನಲ್ಲಿ ಇಟ್ಟಿದ್ದೆ. ಟಿಕೆಟ್ ಪಡೆಯುವಷ್ಟರಲ್ಲಿ ಬ್ಯಾಗಿನಿಂದ ಚಿನ್ನಾಭರಣ ಕಳವು ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.