
ಪ್ರಜಾವಾಣಿ ವಾರ್ತೆ
ಬೆಂಗಳೂರು: ದೀಪಾವಳಿಯ ಅಂಗವಾಗಿ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಆಯೋಜಿಸಲಾಗಿದ್ದ ‘ಗೋ ಗ್ರೀನ್ ದಿಸ್ ಗೋವರ್ಧನ್ ಉತ್ಸವ’ದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳು ನಡೆದವು.
‘ಭೂಮಿಯ ಮೇಲೆ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪದಂತಹ ಸವಾಲುಗಳನ್ನು ಎದುರಿಸಲು ಸಹಜ, ಸಾತ್ವಿಕ ಮತ್ತು ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು’ ಎಂದು ಸಂಘಟಕರು ಹೇಳಿದರು.
‘ಗೋವರ್ಧನ ಲೀಲಾ – ಮಾನವಕುಲವನ್ನು ಪರಿಸರ ಅಪಾಯದಿಂದ ರಕ್ಷಿಸುವ ದಿವ್ಯ ಹಸ್ತಕ್ಷೇಪ’ ಎಂಬ ವಿಷಯ ಕುರಿತು ಉಪನ್ಯಾಸ ನಡೆಯಿತು.
ಉತ್ಸವದಲ್ಲಿ 12 ಅಡಿ ಎತ್ತರದ ಗೋವರ್ಧನ ದರ್ಶನ, ಹೂವುಗಳ ಪ್ರದರ್ಶನ, ಗೋ ಪೂಜೆ, ಘೃತದೀಪಾರಾಧನೆ ನಡೆಯಿತು. ಭಕ್ತಿ ಕೀರ್ತನೆಗಳು ಜನರನ್ನು ಆಕರ್ಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.