ADVERTISEMENT

ಕುಲವನಹಳ್ಳಿ: ಅಕ್ಕನ ಮಣಿಸಿದ ತಂಗಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 20:50 IST
Last Updated 2 ಜನವರಿ 2021, 20:50 IST
ಸುನಂದಮ್ಮ
ಸುನಂದಮ್ಮ   

ದಾಬಸ್ ಪೇಟೆ: ರಾಜಕೀಯದಲ್ಲಿ ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರು ಹಾಗೂ ಸಂಬಂಧಿಕರ ಮಧ್ಯೆ ನಡೆಯುವ ಹಣಾಹಣಿ ಸಹಜವಾಗಿಯೇ ಕುತೂಹಲ ಕೆರಳಿಸುತ್ತದೆ. ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಕ್ಕನನ್ನುತಂಗಿ ಸೋಲಿಸುವ ಮೂಲಕ ಜಯದ ನಗೆ ಬೀರಿದ್ದಾರೆ.

ಕುಲವನಹಳ್ಳಿ ವಾರ್ಡ್‌ನ ಮಹಿಳಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹೋದರಿಯರಾದ ಸುನಂದಮ್ಮ ಹಾಗೂ ಚಂದ್ರಮ್ಮ ಪ್ರತಿಸ್ಪರ್ಧಿಗಳಾಗಿದ್ದರು. ಇವರಿಬ್ಬರ ನಡುವಿನ ಸ್ಪರ್ಧೆ ಗ್ರಾಮದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿತ್ತು.

ಅಕ್ಕನೊಂದಿಗೆ ಸ್ಪರ್ಧೆಯಲ್ಲಿದ್ದ ಮತ್ತೋರ್ವ ಮಹಿಳೆಶೋಭಾ ಎಂಬುವರನ್ನೂಹಿಂದಿಕ್ಕಿದ ಸುನಂದಮ್ಮ, 292 ಮತಗಳನ್ನು ಪಡೆಯುವ ಮೂಲಕ ಮೂರು ಮತಗಳ ಅಂತರದ ಜಯ ಸಾಧಿಸಿದ್ದಾರೆ. ಇವರಿಗೆ 289 ಮತಗಳ ಮೂಲಕಶೋಭಾ ಪೈಪೋಟಿ ನೀಡಿದ್ದರು.

ADVERTISEMENT

‘10 ವಷಗಳ ಹಿಂದೆ ಇದೇ ವಾರ್ಡ್‌ನಿಂದ ಸ್ಪರ್ಧಿಸಿ, ಸೋಲು ಕಂಡಿದ್ದೆ. ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ವಾರ್ಡ್‌ನ ಜನರೊಂದಿಗಿನ ಒಡನಾಟ ಹಾಗೂ ಬೆಂಬಲದಿಂದ ಜಯ ಸಾಧ್ಯವಾಯಿತು. ವಾರ್ಡ್‌ಗೆ ಬೇಕಾದ ಸೌಲಭ್ಯ ಕಲ್ಪಿಸುವ ಜೊತೆಗೆ ಪಂಚಾಯಿತಿಯಿಂದ ಜನತೆಗೆ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸುತ್ತೇನೆ’ ಎನ್ನುತ್ತಾರೆ ಸುನಂದಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.