ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿ ಹಾಗೂ ರಾಜ್ಯ ಚುನಾವಣಾ ಆಯೋಗ ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೀಸಲಾತಿ ಹಂಚಿಕೆಯಲ್ಲಿರುವ ಗೊಂದಲ, ಕೋರ್ಟ್ ಆದೇಶಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಈ ಹಿನ್ನೆಲೆಯೊಳಗೆ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಾ? ಎಲ್ಲ ಗೊಂದಲಗಳಿಗೂ ಪರಿಹಾರ ಇದೆಯೇ? ನಿಜಕ್ಕೂ ಜಿಬಿಎ ಬೇಕಿತ್ತಾ? ಬಿಬಿಎಂಪಿ ವಿಭಜನೆಯಿಂದ ಸೃಷ್ಟಿಯಾಗಿರುವ ಐದು ಪಾಲಿಕೆಗಳಿಂದ ಕೆಲವು ಪಾಲಿಕೆಗಳಿಗೆ ಸಂಪನ್ಮೂಲದ ಕೊರತೆಯಾಗಲಿದೆಯೇ? ಎಂದೂ ಪರಿಹಾರ ಕಾಣದೇ ಇರುವ ಬೆಂಗಳೂರಿನ ಸಮಸ್ಯೆಗಳಿಗೆ ಜಿಬಿಎ, ಪಾಲಿಕೆಗಳ ಸೃಷ್ಟಿಯಿಂದ ಪ್ರಯೋಜನ ಇದೆಯೇ? ಇವಿಎಂ ಬದಲು ಬ್ಯಾಲಟ್ ಬಳಕೆಯಿಂದ ಆಗುವ ಸಮಸ್ಯೆ ಏನು? ಈ ಕುರಿತ ಸಮಗ್ರ ಚರ್ಚೆ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.