ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ನಗರ ಯೋಜನೆಗೆ ಮತ್ತಷ್ಟು ಪ್ರದೇಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:35 IST
Last Updated 5 ನವೆಂಬರ್ 2025, 4:35 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧೀನದಲ್ಲಿರುವ ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಮತ್ತಷ್ಟು ಗ್ರಾಮಗಳನ್ನು ಸೇರಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿಯ ಮಲ್ಲಸಂದ್ರ, ಮನವರ್ತೆ ಕಾವಲ್‌ ಹಾಗೂ ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಲಕ್ಷ್ಮೀಪುರ, ಕಾನ್ಶಿರಾಮನಗರ, ಲಕ್ಷ್ಮೀಪುರ ಗ್ರಾಮದ ಎಲ್ಲ ಬಡಾವಣೆಗಳು ಸೇರಿದಂತೆ 329.99 ಹೆಕ್ಟೇರ್‌ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಸೇರಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ADVERTISEMENT

‘ಗ್ರೇಟರ್‌ ಬೆಂಗಳೂರು ಪ್ರದೇಶ’ವನ್ನು (ಹಿಂದಿನ ಬಿಬಿಎಂಪಿ) ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವೆಂದು ಅಕ್ಟೋಬರ್‌ 13ರಂದು ಘೋಷಿಸಿ, ನಗರ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿತ್ತು.

ನಗರಾಭಿವೃದ್ಧಿ ಇಲಾಖೆಯ ಮಂಗಳವಾರದ ಆದೇಶ ನಂತರ, ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ 303 ಗ್ರಾಮಗಳ 683.51 ಚದರ ಕಿ.ಮೀ ವ್ಯಾಪ್ತಿ, 686.81 ಚದರ ಕಿ.ಮೀಗೆ ವಿಸ್ತಾರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.