ADVERTISEMENT

ಗ್ರೇಟರ್ ಬೆಂಗಳೂರು: ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ

ಎರಡು ನಗರ ಪಾಲಿಕೆಗಳಲ್ಲಿ ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳು 

ಆರ್. ಮಂಜುನಾಥ್
Published 2 ಅಕ್ಟೋಬರ್ 2025, 23:30 IST
Last Updated 2 ಅಕ್ಟೋಬರ್ 2025, 23:30 IST
   

ಬೆಂಗಳೂರು: ಒಂದು ವಿಧಾನಸಭೆ ಕ್ಷೇತ್ರದ ಪ್ರದೇಶಗಳು ಒಂದೇ ನಗರ ಪಾಲಿಕೆಯಲ್ಲಿ ಇರಬೇಕೆಂಬ ನಿಯಮಗಳಿದ್ದರೂ, ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳು ಎರಡಕ್ಕಿಂತ ಹೆಚ್ಚು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿವೆ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಜಿಬಿಜಿಎ) ಅಧ್ಯಾಯ 4ರ ನಗರ ಪಾಲಿಕೆ ರಚನೆಯ ಉಪ ಪ್ರಕರಣ 3ರ ಪ್ರಕಾರ, ‘ಒಂದು ವಿಧಾನಸಭೆ ಕ್ಷೇತ್ರವನ್ನು ಎರಡು ಅಥವಾ ಹೆಚ್ಚಿನ ನಗರ ಪಾಲಿಕೆಗಳಿಗೆ ವಿಭಜಿಸತಕ್ಕದ್ದಲ್ಲ’. ಆದರೆ, ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಒಟ್ಟು 19 ವಾರ್ಡ್‌ಗಳು ಮೂರು ನಗರ ಪಾಲಿಕೆಗಳಿಗೆ ಹಂಚಿಕೆಯಾಗಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ 13 ವಾರ್ಡ್‌ಗಳಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಐದು ವಾರ್ಡ್ ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಒಂದು ವಾರ್ಡ್ ಇದೆ.

ADVERTISEMENT

ಯಶವಂತಪುರ ವಿಧಾನಸಭೆ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಒಂದು ವಾರ್ಡ್ ದಕ್ಷಿಣ ನಗರ ಪಾಲಿಕೆಯಲ್ಲಿದ್ದರೆ, ಉಳಿದ 11 ವಾರ್ಡ್‌ಗಳು ಪಶ್ಚಿಮ ನಗರ ಪಾಲಿಕೆಯಲ್ಲಿವೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ 18 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳು ಉತ್ತರ ನಗರ ಪಾಲಿಕೆಯಲ್ಲಿದ್ದರೆ, ಪಶ್ಚಿಮ ನಗರ ಪಾಲಿಕೆಯಲ್ಲಿ 10 ವಾರ್ಡ್‌ಗಳಿವೆ. ಪದ್ಮನಾಭಗರ ವಿಧಾನಸಭೆ ಕ್ಷೇತ್ರದ 14 ವಾರ್ಡ್‌ಗಳಲ್ಲಿ ದಕ್ಷಿಣ ನಗರ ಪಾಲಿಕೆಯಲ್ಲಿ 6 ವಾರ್ಡ್ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 8 ವಾರ್ಡ್‌ಗಳು ಹಂಚಿಕೆಯಾಗಿವೆ. ಮಹದೇವಪುರ ವಿಧಾನಸಭೆ ಕ್ಷೇತ್ರದ 24 ವಾರ್ಡ್‌ಗಳಲ್ಲಿ ಒಂದು ವಾರ್ಡ್ ಮಾತ್ರ ದಕ್ಷಿಣ ನಗರ ಪಾಲಿಕೆಯಲ್ಲಿದ್ದು, ಉಳಿದ 23 ವಾರ್ಡ್‌ಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ.

25 ಸಾವಿರ ಜನಸಂಖ್ಯೆ: ಐದೂ ನಗರ ಪಾಲಿಕೆಗಳ ವಾರ್ಡ್ ಜನಸಂಖ್ಯೆಯನ್ನು ಸರಾಸರಿ 25 ಸಾವಿರ ಇರುವಂತೆ ಪುನರ್ ವಿಂಗಡಣೆ ಮಾಡಲಾಗಿದೆ. ಒಟ್ಟು 368 ವಾರ್ಡ್‌ಗಳಲ್ಲಿ ಪ್ರತಿಯೊಂದು ವಾರ್ಡ್‌ನ ಜನಸಂಖ್ಯೆ 20 ಸಾವಿರದಿಂದ 27 ಸಾವಿರ ಇದೆ.

ವಾರ್ಡ್ ನಕ್ಷೆ: ಐದು ನಗರ ಪಾಲಿಕೆಗಳ ವಾರ್ಡ್‌ಗಳ ಗಡಿಯನ್ನು ವಿಧಾನಸಭೆ ಕ್ಷೇತ್ರದ ನಕ್ಷೆ, ವಾರ್ಡ್ ನಕ್ಷೆಯೊಂದಿಗೆ ಆನ್‌ಲೈನ್‌ನಲ್ಲಿ (https://bbmp.gov.in/gba- corporations-delimitation- 2025/) ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಕಟಿಸಿದೆ.

ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್

ಜಿಬಿಎ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್‌ಗಳಿದ್ದು, ಆನೇಕಲ್ ವಿಧಾನಸಭೆ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದಂತೆ ಒಂದು ವಾರ್ಡ್ ಮಾತ್ರ ಇದೆ.

ಕೆ.ಆರ್. ಪುರದಲ್ಲಿ 27 ವಾರ್ಡ್‌ಗಳಿದ್ದು, ಮಹದೇವಪುರದಲ್ಲಿ 24 ವಾರ್ಡ್‌ಗಳಿವೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 20 ವಾರ್ಡ್‌ಗಳಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ತಲಾ 19 ವಾರ್ಡ್‌ಗಳಿವೆ. ದಾಸರಹಳ್ಳಿ (18 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಪದ್ಮನಾಭನಗರ (14 ವಾರ್ಡ್), ಬ್ಯಾಟರಾಯನಪುರ (14 ವಾರ್ಡ್) ಮತ್ತು ವಿಜಯನಗರ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 13 ವಾರ್ಡ್‌ಗಳಿವೆ.

ಯಾವ ಪಾಲಿಕೆಯಲ್ಲಿದೆ ಯಾವ ವಿಧಾನಸಭೆ ಕ್ಷೇತ್ರ?

ಬೆಂಗಳೂರು ಕೇಂದ್ರ ನಗರ ಪಾಲಿಕೆ- ಒಟ್ಟು 63 ವಾರ್ಡ್‌: ಚಾಮರಾಜಪೇಟೆ (10 ವಾರ್ಡ್), ಚಿಕ್ಕಪೇಟೆ (12 ವಾರ್ಡ್), ಸಿ.ವಿ. ರಾಮನ್ ನಗರ (13 ವಾರ್ಡ್), ಗಾಂಧಿನಗರ (10 ವಾರ್ಡ್), ಶಾಂತಿನಗರ (10 ವಾರ್ಡ್), ಶಿವಾಜಿನಗರ (8 ವಾರ್ಡ್).

ಬೆಂಗಳೂರು ಉತ್ತರ ನಗರ ಪಾಲಿಕೆ- ಒಟ್ಟು 72 ವಾರ್ಡ್‌: ದಾಸರಹಳ್ಳಿ (8 ವಾರ್ಡ್), ಪುಲಕೇಶಿನಗರ (11 ವಾರ್ಡ್) ಬ್ಯಾಟರಾಯನಪುರ (14 ವಾರ್ಡ್), ಯಲಹಂಕ (7 ವಾರ್ಡ್), ರಾಜರಾಜೇಶ್ವರಿನಗರ (5 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಹೆಬ್ಬಾಳ (11 ವಾರ್ಡ್).

ಬೆಂಗಳೂರು ದಕ್ಷಿಣ ನಗರ ಪಾಲಿಕೆ- ಒಟ್ಟು 72 ವಾರ್ಡ್‌: ಆನೇಕಲ್ (1 ವಾರ್ಡ್), ಜಯನಗರ (10 ವಾರ್ಡ್), ಪದ್ಮನಾಭನಗರ (6 ವಾರ್ಡ್), ಬಿಟಿಎಂ ಲೇಔಟ್ (13 ವಾರ್ಡ್), ಬೆಂಗಳೂರು ದಕ್ಷಿಣ (19 ವಾರ್ಡ್), ಬೊಮ್ಮನಹಳ್ಳಿ (20 ವಾರ್ಡ್), ಮಹದೇವಪುರ (1 ವಾರ್ಡ್), ಯಶವಂತಪುರ (1 ವಾರ್ಡ್), ರಾಜರಾಜೇಶ್ವರಿ ನಗರ (1 ವಾರ್ಡ್).

ಬೆಂಗಳೂರು ಪೂರ್ವ ನಗರ ಪಾಲಿಕೆ- ಒಟ್ಟು 50 ವಾರ್ಡ್‌: ಕೆ.ಆರ್. ಪುರ (27 ವಾರ್ಡ್), ಮಹದೇವಪುರ (23 ವಾರ್ಡ್)

ಬೆಂಗಳೂರು ಪಶ್ಚಿಮ ನಗರ ಪಾಲಿಕೆ- ಒಟ್ಟು 111 ವಾರ್ಡ್‌: ಗೋವಿಂದರಾಜ ನಗರ (13 ವಾರ್ಡ್), ದಾಸರಹಳ್ಳಿ (10 ವಾರ್ಡ್), ಪದ್ಮನಾಭನಗರ (8 ವಾರ್ಡ್), ಬಸವನಗುಡಿ (10 ವಾರ್ಡ್), ಮಲ್ಲೇಶ್ವರ (10 ವಾರ್ಡ್), ಮಹಾಲಕ್ಷ್ಮಿ ಲೇಔಟ್ (12 ವಾರ್ಡ್), ಯಶವಂತಪುರ (11 ವಾರ್ಡ್), ರಾಜರಾಜೇಶ್ವರಿ ನಗರ (13 ವಾರ್ಡ್), ರಾಜಾಜಿನಗರ (11 ವಾರ್ಡ್), ವಿಜಯನಗರ (13 ವಾರ್ಡ್).

ಬೆಂಗಳೂರು ಪೂರ್ವ ನಗರ ಪಾಲಿಕೆ | ವಾರ್ಡ್‌: ಪ್ರಮುಖ ಪ್ರದೇಶಗಳು

1.ಕೆ.ನಾರಾಯಣಪುರ:ಕೊತ್ತನೂರು, ಗೆದ್ದಲಹಳ್ಳಿ, ಕೆ.ನಾರಾಯಣಪುರ, ಅರ್ಕಾವತಿ ಲೇಔಟ್‌ 5, 6, 17, 20ನೇ ಬ್ಲಾಕ್‌

2. ಬೈರತಿ: ಶ್ರೀಕೃಷ್ಣನಗರ, ಚಿಕ್ಕಬೈರತಿ, ಬೈರತಿ ಬಂಡೆ

3.ಹೊರಮಾವು ಅಗರ: ಕ್ಯಾಲಸನಹಳ್ಳಿ, ಹೊರಮಾವು, ಬೈರತಿಖಾನೆ, ಅರ್ಕಾವತಿ 18ನೇ ಬ್ಲಾಕ್‌

4.ಚಳ್ಳಕೆರೆ: ಜಿಎನ್‌ಆರ್‌ ಗಾರ್ಡನ್ಸ್‌, ಮೇಘನಪಾಳ್ಯ, ಚಳ್ಳಕೆರೆ, ಸಾಯಿ ಲೇಔಟ್‌

5.ಬಾಬುಸಾಬ್‌ ಪಾಳ್ಯ: ಬ್ಯಾಂಕ್‌ ಅವೆನ್ಯೂ ಕಾಲೊನಿ, ನಂಜಪ್ಪ ಗಾರ್ಡನ್‌, ಪಾಪಯ್ಯ ಲೇಔಟ್‌, ಬಾಬುಸಾಬ್‌ ಪಾಳ್ಯ, ಸಿಎನ್‌ಆರ್ ಲೇಔಟ್‌

6.ಸರೋಜಿನಿ ನಗರ: ನ್ಯೂಶಾಂತಿನಗರ, ಮಂಜುನಾಥ ನಗರ, ಕೃಷ್ಣಮೂರ್ತಿ ಲೇಔಟ್‌

7.ಕಲ್ಕೆರೆ: ಕಲ್ಕೆರೆ, ಜಯಂತಿನಗರ

8. ರಾಮಮೂರ್ತಿ ನಗರ: ಮುನೇಶ್ವರ ಬಡಾವಣೆ, ರಾಮಮೂರ್ತಿ ನಗರ

9.ಕೆ.ಚನ್ನಸಂದ್ರ: ಕೆ.ಚನ್ನಸಂದ್ರ, ಕೌದೇನಹಳ್ಳಿ, ಅಕ್ಷಯ ನಗರ

10.ಟಿ.ಸಿ.ಪಾಳ್ಯ: ಆನಂದಪುರ, ಟಿ.ಸಿ.ಪಾಳ್ಯ

11.ಭಟ್ಟರಹಳ್ಳಿ: ಶ್ರೀ ವಿನಾಯಕ ಲೇಔಟ್‌

12.ಮೇಡಹಳ್ಳಿ: ಸೀಗೆಹಳ್ಳಿ, ಮೇಡಹಳ್ಳಿ, ಮಲ್ಲಪ್ಪ ಬಡಾವಣೆ, ಭಟ್ಟರಹಳ್ಳಿ

13.ಬೆಳತ್ತೂರು: ಕಾಡುಗೋಡಿ ಕಾಲೊನಿ, ಕುಂಬೇನ ಅಗ್ರಹಾರ, ಸಾದರಮಂಗಲ, ಬೆಲ್ಲೂರು, ಕೊಡಿಗೆಹಳ್ಳಿ.

14.ಕಾಡುಗೋಡಿ: ವಿ.ಎಸ್‌. ರೆಡ್ಡಿ ಕಾಲೊನಿ, ಮೈತ್ರಿ ಲೇಔಟ್‌, ಕಾಡುಗೋಡಿ

15.ಹೂಡಿ: ಅಯ್ಯಪ್ಪನಗರ, ಪ್ರೆಸ್ಟೀಜ್‌ ಶಾಂತಿನಿಕೇತನ, ತಿಗಳರಪಾಳ್ಯ, ರಾಮಯ್ಯ ರೆಡ್ಡಿ ಲೇಔಟ್‌

16.ಬಸವನಪುರ: ಸೀಗೆಹಳ್ಳಿ, ಆದಿತ್ಯ ಲೇಔಟ್‌, ಬೃಂದಾವನ ಬಡಾವಣೆ, ಲೂರ್ದು ನಗರ, ನಂದೀಶ್ವರ ಲೇಔಟ್‌, ರಾಜರಾಜೇಶ್ವರಿ ಲೇಔಟ್‌

17.ದೇವಸಂದ್ರ: ಮಂಚೂರಿಯನ್‌ ಸ್ಕ್ರೂ ಲೇಔಟ್‌, ಕೃಷ್ಣರಾಜಪುರ

18.ಕೆ.ಆರ್. ಪುರ: ಐಟಿಐ ಕಾಲೊನಿ, ಜಸ್ಟೀಸ್‌ ಭೀಮಯ್ಯ ಲೇಔಟ್‌

19.ಕೊತ್ತೂರು: ರಾಮಮೂರ್ತಿ ನಗರ, ನರಸಿಂಹಯ್ಯ ಲೇಔಟ್‌

20. ವಿಜಿನಾಪುರ: ಆರ್.ಆರ್‌. ಲೇಔಟ್‌

21.ದೂರವಾಣಿ ನಗರ: ಬೃಂದಾವನ ಬಡಾವಣೆ, ದೂರವಾಣಿನಗರ

22 ಕೆ.ಎಸ್‌. ನಿಸಾರ್‌ ಅಹಮದ್: ಪೈ ಲೇಔಟ್‌, ದರ್ಗಾ ಮೊಹಲ್ಲಾ

23.ಎ.ನಾರಾಯಣಪುರ: ಬಿ. ನಾರಾಯಣಪುರ, ಉದಯನಗರ, ಕಾಮಧೇನು ನಗರ

24.ಚಿಕ್ಕ ದೇವಸಂದ್ರ: ಸಾಲಪ್ಪ ಲೇಔಟ್‌, ಶ್ರೀ ರಾಮಯ್ಯ ವಸತಿ ಬಡಾಣೆ, ಸಾಯಿರಾಮ್‌ ಲೇಔಟ್‌, ಓಂ ಶಕ್ತಿ ಲೇಔಟ್‌

25.ಕಾವೇರಿ ನಗರ: ರಾಜಪಾಳ್ಯ,  ಹೂಡಿ, ಸೀತಾರಾಮಪಾಳ್ಯ, ಕಾವೇರಿನಗರ

26.ಪಟ್ಟಂದೂರು ಅಗ್ರಹಾರ: ಅಂಬೇಡ್ಕರ್‌ ನಗರ, ಪ್ರಶಾಂತ್‌ ಎಕ್ಸ್‌ಟೆನ್ಷನ್‌, ಪಟ್ಟಂದೂರು ಅಗ್ರಹಾರ, ಪೃಥ್ವಿ ಲೇಔಟ್‌, ಡಿಸಿಲ್ವಾ ಲೇಔಟ್‌, ಹ್ಯಾಪಿ ವ್ಯಾಲಿ

27.ಚನ್ನಸಂದ್ರ: ಎಕೆಜಿ ಕಾಲೊನಿ, ಚನ್ನಸಂದ್ರ

28.ಹಗದೂರು: ಇಮ್ಮಡಿಹಳ್ಳಿ, ನಾರಾಯಣಪ್ಪ ಗಾರ್ಡನ್ಸ್‌, ವರ್ತೂರು ಕೋಡಿ, ವಿನಾಯಕನಗರ, ನಾಗೊಂಡನಹಳ್ಳಿ

29.ವೈಟ್‌ಫೀಲ್ಡ್‌: ಡಾಡ್ಸ್‌ವರ್ತ್‌ ಎನ್‌ಕ್ಲೇವ್‌, ವೈಟ್‌ಫೀಲ್ಡ್‌, ರಾಮಗೊಂಡನಹಳ್ಳಿ. ಆರ್‌. ನಾರಾಯಣಪುರ, ಸಾಯಿ ಲೇಔಟ್‌

30. ಕುಂದಲಹಳ್ಳಿ: ಬಿಇಎಂಎಲ್‌ ಲೇಔಟ್‌ 6ನೇ ಹಂತ, ಕುಂದಲಹಳ್ಳಿ, ಸಿದ್ದಾಪುರ, ತೂಬರಹಳ್ಳಿ, ಮೀನಾಕ್ಷಿ ಲೇಔಟ್‌

31. ಇಪಿಐಪಿ ಇಂಡಸ್ಷ್ರಿಯಲ್‌ ಏರಿಯಾ: ಆಶ್ರಯ ಬಡಾವಣೆ, ಹಸಿರು ಡೊಮೇನ್‌, ಇಪಿಐಪಿ ವಲಯ, ಸ್ನೇಹಿತ ಲೇಔಟ್‌, ವಿನಾಯಕ ಬಡಾವಣೆ

32.ಗರುಡಾಚಾರ್‌ ಪಾಳ್ಯ: ಮಹದೇವಪುರ, ಗರುಡಾಚಾರ್‌ ಪಾಳ್ಯ, ಮಹೇಶ್ವರಿ ನಗರ, ಬಿ. ಚಿಕ್ಕಣ್ಣ ಲೇಔಟ್‌, ಆರ್‌ಎಚ್‌ಬಿ ಕಾಲೊನಿ

33.ಮಹದೇವಪುರ: ಕಗ್ಗದಾಸಪುರ, ಸರಸ್ವತಿ ನಗರ, ಶಿವಗಂಗಾ ಲೇಔಟ್‌, ಅನಕಪ್ಪ ಬಡಾವಣೆ

34.ಉದಯ್‌ ನಗರ: ಎ. ನಾರಾಯಣಪುರ

35. ವಿಜ್ಞಾನ ನಗರ: ಬಿಇಎಂಎಲ್‌ ಟೌನ್‌ಶಿಪ್‌, ಅಬ್ಬಯ್ಯ ರೆಡ್ಡಿ ಲೇಔಟ್‌, ಬಿಇಎಂಎಲ್‌ ಟೌನ್‌ಶಿಪ್‌

36. ತಲಕಾವೇರಿ ಲೇಔಟ್‌: ವಿಜ್ಞಾನ ನಗರ

37. ಅಶ್ವತ್ಥ್‌ ನಗರ: ಹೇಮಂತನಗರ, ಸಂಜಯನಗರ, ಆನಂದನಗರ, ಅಶ್ವತ್ಥ್‌ನಗರ, ರಾಮಾಂಜನೇಯ ಬಡಾವಣೆ

38. ದೊಡ್ಡನೆಕ್ಕುಂದಿ: ಶಾಮಣ್ಣ ರೆಡ್ಡಿ ಲೇಔಟ್‌, ಕಾರ್ತಿಕ ನಗರ, ಎಲ್‌ಆರ್‌ಡಿಇ ಲೇಔಟ್‌, ದೊಡ್ಡನೆಕ್ಕುಂದಿ, ಫರ್ನ್ಸ್‌ ಹ್ಯಾಬಿಟ್ಯಾಟ್‌

39. ಎಇಸಿಎಸ್‌ ಲೇಔಟ್‌: ಸಿಲ್ವರ್‌ ಸ್ಪ್ರಿಂಗ್ಸ್‌ ಲೇಔಟ್‌, ಚಿನ್ನಪ್ಪನಹಳ್ಳಿ, ಎಇಸಿಎಸ್‌ ಲೇಔಟ್‌ ಡಿ ಬ್ಲಾಕ್‌– ಬಿ ಬ್ಲಾಕ್‌, ವೈಕುಂಠಂ ಲೇಔಟ್‌

40. ಮುನ್ನೇನಕೊಳಾಲ: ಗಾಂಧಿನಗರ, ಬಳಗೆರೆ, ಮುನ್ನೇನಕೊಳಾಲ, ಶೋಭಾ ಆಯನ, ಪ್ರಕೃತಿ ಅರ್ಬಲ್‌ ವಿಲ್ಲೆ

41. ವರ್ತೂರು: ರಾಮಸ್ವಾಮಿ ಲೇಔಟ್, ಮಧುರಾನಗರ, ಸೊರಹುಣಸೆ, ವರ್ತೂರು

42.ಗುಂಜೂರು: ಗುಂಜೂರು, ಕಾರ್ಮೆಲಾರಾಮ್‌, ಗುಂಜೂರುಪಾಳ್ಯ, ದೊಡ್ಡಕನ್ನಳ್ಳಿ, ಹೊಸಹಳ್ಳಿ, ಚಿಕ್ಕಬೆಳ್ಳಂದೂರು, ಸನ್ನಿ ಬ್ರೂಕ್ಸ್‌

43.ಪಣತ್ತೂರು: ಪಿ.ಆರ್. ಲೇಔಟ್‌, ಭೋಗನಹಳ್ಳಿ, ಎಂಎಸ್‌ಆರ್‌ ಲೇಔಟ್‌, ಅಯ್ಯಪ್ಪ ಲೇಔಟ್, ಕಾಡುಬೀಸನಹಳ್ಳಿ, ಪಣತ್ತೂರು, ವಿವೇಕಾನಂದ ಲೇಔಟ್‌

44. ದೊಡ್ಡಕನ್ನಳ್ಳಿ: ಆದರ್ಶ ಪಾಮ್‌ ರಿಟ್ರೀಟ್‌, ದೇವರಬೀಸನಹಳ್ಳಿ, ಓಷಿಯಾನಸ್‌ ಫ್ರೀಸಿಯಾ ಎನ್‌ಕ್ಲೇವ್‌, ಕ್ರಿಸ್ಟಲ್‌ ಟಿಯಾರಾ

45.ಬೆಳ್ಳಂದೂರು: ಗ್ರೀನ್‌ ಗ್ಲೆನ್‌ ಲೇಔಟ್‌, ಬೆಳ್ಳಂದೂರು, ಕರಿಯಮ್ಮನ ಅಗ್ರಹಾರ

46.ಚಲ್ಲಘಟ್ಟ: ಯಮಲೂರು, ಬೇಲೂರು ಅಂಬೇಡ್ಕರ್‌ ನಗರ, ಬೇಲೂರು ನಾಗಸಂದ್ರ, ಚಲ್ಲಘಟ್ಟ, ಕೆಂಪಾಪುರ

47.ಮಾರತ್‌ಹಳ್ಳಿ: ಮಾರತ್‌ಹಳ್ಳಿ

48.ವಿಭೂತಿಪುರ: ರಮೇಶ್‌ ನಗರ

49.ಅನ್ನಸಂದ್ರ ಪಾಳ್ಯ: ಕರೀಂನಗರ, ಅನ್ನಸಂದ್ರ ಪಾಳ್ಯ, ಲಾಲ್‌ಬಹದ್ದೂರ್‌ ಶಾಸ್ತ್ರಿ ನಗರ, ಇಸ್ಲಾಂಪುರ

50.ಜಗದೀಶ್‌ ನಗರ: ವಿಮಾನಪುರ, ಎಚ್ಎಎಲ್‌ ಟೌನ್‌ಶಿಪ್‌, ಜಗದೀಶ್‌ನಗರ, ಜ್ಯೋತಿನಗರ, ನೆಲ್ಲೂರುಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.