ADVERTISEMENT

ಸಿಬಿಐ, ಇಡಿ ಬಳಸಿ ಬೆದರಿಕೆಯೊಡ್ಡದ ಸಿಂಗ್: ಎಸ್‌ಟಿಎಸ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 15:38 IST
Last Updated 3 ಮಾರ್ಚ್ 2025, 15:38 IST
ಎಸ್.ಟಿ. ಸೋಮಶೇಖರ್‌
ಎಸ್.ಟಿ. ಸೋಮಶೇಖರ್‌    

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬೆಂಬಲಿಸಿ ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಜೆಡಿಎಸ್‌ನ ಜಿ.ಟಿ. ದೇವೇಗೌಡ ಮತ್ತು ಬಿಜೆಪಿಯ ಎಸ್.ಟಿ. ಸೋಮಶೇಖರ್‌ ಅವರು ಕಾಂಗ್ರೆಸ್‌ ನಾಯಕರನ್ನು ಕೊಂಡಾಡಿದರು.

ತಾವು ಕಾಂಗ್ರೆಸ್‌ನಲ್ಲಿದ್ದಾಗ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿ ಮಾಡುತ್ತಿದ್ದುದ್ದನ್ನು ನೆನಪಿಸಿಕೊಂಡ ಸೋಮಶೇಖರ್‌, ‘ಅವರು ಹತ್ತು ವರ್ಷ ದೇಶದ ಪ್ರಧಾನಿಯಾಗಿದ್ದರು. ಆಗ ಒಮ್ಮೆಯೂ ಒಬ್ಬ ರಾಜಕಾರಣಿಯ ಮೇಲೂ ಸಿಬಿಐ, ಜಾರಿ ನಿರ್ದೇಶನಾಲಯದ ದಾಳಿ ಮಾಡಿಸಿ ಬೆದರಿಸಿರಲಿಲ್ಲ’ ಎಂದರು.

‘2004ರಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ಆಗುತ್ತಾರೆ ಎಂದು ಇಡೀ ದೇಶವೇ ನೋಡುತ್ತಿತ್ತು. ಆದರೆ, ಅವರು ಅಧಿಕಾರಕ್ಕೇರಲು ನಿರಾಕರಿಸಿ ಮನಮೋಹನ್‌ ಸಿಂಗ್‌ ಎಂಬ ಮೇಧಾವಿಯನ್ನು ಪ್ರಧಾನಿ ಮಾಡಿದರು. ಇದಕ್ಕಾಗಿ ಇಡೀ ದೇಶ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು’ ಎಂದು ದೇವೇಗೌಡ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.