ADVERTISEMENT

ಗುರುಕುಲ ಶಿಕ್ಷಣಕ್ಕೆ ಒತ್ತು ನೀಡಿ: ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 15:27 IST
Last Updated 20 ಫೆಬ್ರುವರಿ 2026, 15:27 IST
<div class="paragraphs"><p> ಸಮಾವೇಶದಲ್ಲಿ ಭಾರತೀಯ ವಿದ್ವತ್ ಪರಿಷತ್ ಕಾರ್ಯದರ್ಶಿ ವಿ. ಶಿವಾನಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಎಸ್. ಅಹಲ್ಯಾ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ವಿಭು ಅಕಾಡೆಮಿ ಸಂಸ್ಥಾಪಕಿ ವಿ.ಬಿ.ಆರತಿ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಗಿರೀಶ್ ಪಾಲ್ಗೊಂಡಿದ್ದರು</p></div>

ಸಮಾವೇಶದಲ್ಲಿ ಭಾರತೀಯ ವಿದ್ವತ್ ಪರಿಷತ್ ಕಾರ್ಯದರ್ಶಿ ವಿ. ಶಿವಾನಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಎಸ್. ಅಹಲ್ಯಾ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ವಿಭು ಅಕಾಡೆಮಿ ಸಂಸ್ಥಾಪಕಿ ವಿ.ಬಿ.ಆರತಿ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಗಿರೀಶ್ ಪಾಲ್ಗೊಂಡಿದ್ದರು

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಅಳವಡಿಸಿಕೊಂಡರೆ ಹತ್ತು ವರ್ಷದಲ್ಲಿ ಭಾರತದ ಚಿತ್ರಣವೇ ಬದಲಾಗಬಹುದು ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.

ADVERTISEMENT

ಭಾರತೀಯ ವಿದ್ವತ್ ಪರಿಷತ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ರಾಷ್ಟ್ರ ಸೇವಿಕಾ ಸಮಿತಿ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತಿ’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಅತ್ಯಂತ ಅವಶ್ಯಕವಾಗಿದೆ. ದೇಶದಲ್ಲಿ 10 ಕೋಟಿಗೂ ಅಧಿಕ ಸರ್ಕಾರಿ ಶಾಲೆಗಳಿದ್ದು, ಭಾರೀ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗುರುಕುಲ ಪದ್ಧತಿಯ ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಸಂಸ್ಕಾರ ಬದಲಾಗಿ ಹೊಸ ಆಯಾಮ ಬರಲಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಸಹಾನುಭೂತಿ, ಸ್ಭಾವನೆ ಮೂಡಬೇಕಾದರೆ ಇಂದು ಗುರುಕುಲ ಶಿಕ್ಷಣ ಪದ್ಧತಿ ಅತ್ಯಂತ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರಗಳು ಮತ್ತು ಪೋಷಕರು ಚಿಂತಿಸಬೇಕು ಎಂದು ಮನವಿ ಮಾಡಿದರು.

ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಸಂಸ್ಕೃತಿ, ಮೌಲ್ಯವನ್ನು ಮರೆಯುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನಾಯಕತ್ವದ ವಿಷಯದಲ್ಲೂ ಮಹಿಳೆಯರು ಪುರುಷರಿಗೆ ಕಡಿಮೆ ಇಲ್ಲ. ಅವಕಾಶ ಸಿಕ್ಕರೆ ಮಹಿಳೆಯರು ಏನು ಬೇಕಾದರೂ ಮಾಡಿ ತೋರಿಸಬಲ್ಲರು. ಹೆಣ್ಣು ಮಕ್ಕಳು ಮಾದರಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್‌.ಅಹಲ್ಯಾ ಮಾತನಾಡಿ, ಶಿಕ್ಷಣಕ್ಕೆ ಅವಕಾಶ ದೊರೆತ ಬಳಿಕ ದೇಶದಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಆದರೂ ಇನ್ನಷ್ಟು ಹೆಚ್ಚಳಕ್ಕೆ ಒತ್ತು ನೀಡಬೇಕು‘ ಎಂದು  ತಿಳಿಸಿದರು.

‘ದೇಶದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಶೇ 28.5ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 34.81ರಷ್ಟಿದೆ. ಒಂದು ದಶಕದಲ್ಲಿ ದಾಖಲಾತಿಯಲ್ಲಿ ಹೆಚ್ಚಳವಾಗಿರುವುದನ್ನು ಅಂಕಿ ಸಂಖ್ಯೆಗಳೇ ಹೇಳುತ್ತವೆ. ಮಹಿಳೆಯರಂತೂ ಶಿಕ್ಷಣದ ಮೂಲಕವೇ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

‘ದಾಖಲಾತಿ ಹೆಚ್ಚಿಸಲು ಸರ್ಕಾರದಿಂದ ಪ್ರಯತ್ನಗಳು ನಡೆದರೂ, ಗ್ರಾಮೀಣ, ಆದಿವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಶಿಕ್ಷಣದ ಗುಣಮಟ್ಟ, ಉದ್ಯೋಗಕ್ಕೆ ಸೇರಲು ಹಲವು ಅಡೆತಡೆ ಎದುರಿಸುತ್ತಿದ್ದಾರೆ. ಮಹಿಳಾ ಶಿಕ್ಷಣಕ್ಕೆ, ವಿಶೇಷವಾಗಿ ಉನ್ನತ ಶಿಕ್ಷಣ, ಕೌಶಲ ಅಭಿವೃದ್ಧಿ ಅಧ್ಯಯನಕ್ಕೆ ಸಮಗ್ರ ದೃಷ್ಟಿಕೋನವುಳ್ಳ ಚರ್ಚೆಯಾಗಬೇಕಿದೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಕುಲಸಚಿವ ಗಿರೀಶ್‌ ಚಂದ್ರ, ಡೀನ್‌ ವಿ.ಶಿವಾನಿ, ವಿಭು ಅಕಾಡೆಮಿ ಸಂಸ್ಥಾಪಕಿ ವಿ.ಬಿ.ಆರತಿ ಉಪಸ್ಥಿತರಿದ್ದರು.  ನಂತರ ಗೋಷ್ಠಿಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.