
ಪ್ರಜಾವಾಣಿ ವಾರ್ತೆ
ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳವಾರ ಚೆನ್ನೈಗೆ ತೆರಳಿದರು. ಗುರುವಾರ ಶಸ್ತ್ರಚಿಕಿತ್ಸೆ ನಡೆಯಲಿದೆ.
ಚೆನ್ನೈ ಪ್ರಯಾಣಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕುಮಾರಸ್ವಾಮಿ, ‘ಹುಟ್ಟಿನಿಂದಲೇ ನನ್ನ ಹೃದಯದ ಕವಾಟ ಒಂದರಲ್ಲಿ ಸಮಸ್ಯೆ ಇದೆ. ಹಿಂದೆ ಎರಡು ಬಾರಿ ಪ್ರಾಣಿಜನ್ಯ ಪದಾರ್ಥಗಳಿಂದ ತಯಾರಿಸಿದ ‘ಟಿಶ್ಯೂ ಸ್ಟೆಂಟ್’ ಅಳವಡಿಸಲಾಗಿತ್ತು. ಈಗ ಲೋಹದ ಸ್ಟೆಂಟ್ ಅಳವಡಿಸುವ ಶಸ್ತ್ರಚಿಕಿತ್ಸೆಗಾಗಿ ಹೋಗುತ್ತಿದ್ದೇನೆ’ ಎಂದರು.
‘ವಾರದೊಳಗೆ ಹಿಂದಿರುಗುತ್ತೇನೆ. ಆ ನಂತರದಲ್ಲಿ ಎಂದಿನಂತೆಯೇ ಚುನಾವಣಾ ಪ್ರಚಾರದ ಕೆಲಸಗಳಲ್ಲಿ ಭಾಗವಹಿಸುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.