ADVERTISEMENT

ಕ್ಷೌರಿಕ ನಿಗಮ ಸ್ಥಾಪನೆಗೆ ಒತ್ತಾಯ

ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:14 IST
Last Updated 16 ಜುಲೈ 2019, 19:14 IST
‘ಶಿವಶರಣ ಹಡಪದ ಅಪ್ಪಣ್ಣ’ ಭಾವಚಿತ್ರಕ್ಕೆ ಶರಣ ಈಶ್ವರ ಮಂಟೂರ, ಹಡಪದ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾರಾವ್‌ ನರಿಬೋಳ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ಕೆ.ಎಂ.ಜಾನಕಿ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
‘ಶಿವಶರಣ ಹಡಪದ ಅಪ್ಪಣ್ಣ’ ಭಾವಚಿತ್ರಕ್ಕೆ ಶರಣ ಈಶ್ವರ ಮಂಟೂರ, ಹಡಪದ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾರಾವ್‌ ನರಿಬೋಳ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ಕೆ.ಎಂ.ಜಾನಕಿ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಡಪದ ಸಮುದಾಯವರ ಅಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ ಕ್ಷೌರಿಕ ನಿಗಮ ಸ್ಥಾಪಿಸಬೇಕು. ಇಲ್ಲದಿದ್ದರೆ, ಸಮುದಾಯದವರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಎಚ್ಚರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಶಿವಶರಣ ಹಡಪದ ಅಪ್ಪಣ್ಣ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷೌರಿಕ ವೃತ್ತಿಯಲ್ಲೇ ಅನೇಕ ಪಂಗಡಗಳಿವೆ. ಹಡಪದ ಸಮಾಜವನ್ನು ಸ್ಥಳೀಯ ಮಟ್ಟದಲ್ಲಿ ಬೇರೆ ಬೇರೆ ಹೆಸರಿನಿಂದ ಗುರುತಿಸಲಾಗುತ್ತಿದೆ. ಆದರೆ,ಸರ್ಕಾರ ಹಡಪ (ಕ್ಷೌರಿಕ) ಸಮುದಾಯವನ್ನು ಕಡೆಗಣಿಸಿದ್ದು, ಜನರು ಬಹಳ ಹಿಂದುಳಿದಿದ್ದಾರೆ. ಕೂಡಲೇ ಕ್ಷೌರಿಕ ಸಮಾಜವನ್ನು ಒಗ್ಗೂಡಿಸಿ ‘ಕ್ಷೌರಿಕ ನಿಗಮ’ ಸ್ಥಾಪಿಸಬೇಕು ಅಥವಾಹಡಪದ ಅಪ್ಪಣ್ಣ ಹೆಸರಿನಲ್ಲಿಯೇ ನಿಗಮ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಸ್ಥಳೀಯ ಮಟ್ಟದಲ್ಲಿಹಡಪದ ಅಪ್ಪಣ್ಣ ಜಯಂತಿ ಆಚರಣೆಗೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ದಿನಾಂಕ ನಿಗದಿಪಡಿಸಿಷರತ್ತು ಹಾಕುತ್ತಾರೆ. ಇದು ತಿಂಗಳ ಪೂರ್ತಿ ನಡೆಯುವ ಕಾರ್ಯಕ್ರಮ. ಸಮುದಾಯದವರು ಇಚ್ಛಿಸುವ ದಿನದಂದು ಆಚರಣೆಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಅವರು ಕೋರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ, ‘ಹಡಪದ ಸಮುದಾಯ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬೇಕಾಗಿದೆ. ಪ್ರತಿ ವೃತ್ತಿಯೂ ತನ್ನದೇ ಆದ ಮಹತ್ವ ಹಾಗೂ ಹಿನ್ನೆಲೆಯನ್ನು ಹೊಂದಿರುತ್ತದೆ. ಯಾವುದೇ ಉದ್ಯೋಗ ಕೀಳು ಮಟ್ಟದ್ದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.