ADVERTISEMENT

ಹಫ್ತಾ ವಸೂಲಿ; ಕಾರ್ಪೊರೇಟರ್ ಪತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 18:50 IST
Last Updated 16 ನವೆಂಬರ್ 2018, 18:50 IST

ಬೆಂಗಳೂರು: ಹೋಟೆಲ್‌ಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದಡಿ ಶಿವಾಜಿನಗರದ ಕಾರ್ಪೊರೇಟರ್ ಫರೀದಾ ಅವರ ಪತಿ ಇಸ್ತಿಯಾಕ್ ಅಹಮದ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಇಸ್ತಿಯಾಕ್ ರೌಡಿಶೀಟರ್ ಆಗಿದ್ದು, ಶಿವಾಜಿನಗರ ಸುತ್ತಮುತ್ತಲ ಹೋಟೆಲ್‌ಗಳಿಗೆ ಹೋಗಿ ಹಫ್ತಾ ವಸೂಲಿ ಮಾಡುತ್ತಿದ್ದ. ಅಲ್ಲದೆ, ಗುಂಪು ಕಟ್ಟಿಕೊಂಡು ದಾಂದಲೆ ಮಾಡುತ್ತಿದ್ದ. ಈ ಸಂಬಂಧ ಹಲವರಿಂದ ದೂರುಗಳು ಬಂದಿದ್ದವು’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

ಪೊಲೀಸರು ನ.13ರಂದೇ ಇಸ್ತಿಯಾಕ್ ಮನೆ ಮೇಲೆ ದಾಳಿ ನಡೆಸಿದ್ದರು. ಆಗ ಆತ ಮನೆಯಲ್ಲಿರಲಿಲ್ಲ. ಹೀಗಾಗಿ, ಫರೀದಾ ಅವರನ್ನು ವಿಚಾರಣೆ ನಡೆಸಿ ವಾಪಸ್ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಆರೋಪಿ ಮನೆಗೆ ಬಂದ ವಿಚಾರ ತಿಳಿದು, ಪುನಃ ದಾಳಿ ನಡೆಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.