ADVERTISEMENT

ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ: ಹಲವು ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 16:03 IST
Last Updated 27 ಜುಲೈ 2025, 16:03 IST
   

ಬೆಂಗಳೂರು: ಎಚ್‌ಎಎಲ್‌ ಏರ್‌ಪೋರ್ಟ್‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್ ನಗರ ಜಂಕ್ಷನ್‌ನಿಂದ ಕಲಾಮಂದಿರದವರೆಗೆ ಹೊರ ವರ್ತುಲ ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲ ಮಾರ್ಪಾಡು ಮಾಡಲಾಗಿದೆ.

ಜೀವಿಕಾ ಆಸ್ಪತ್ರೆ ಸಮೀಪ ಮಾರತ್ತಹಳ್ಳಿ ಕಡೆಯ ಸರ್ವೀಸ್‌ ರಸ್ತೆಯಲ್ಲಿ ಕಲಾಮಂದಿರದ ಕಡೆಯಿಂದ ಹೊರ ವರ್ತುಲ ರಸ್ತೆಗೆ ಪ್ರವೇಶಿಸುವ ಹಾಗೂ ಯಮಹಾ ಶೋ ರೂಂ ಬಳಿ ಹೊರ ವರ್ತುಲ ರಸ್ತೆಯಿಂದ ಸರ್ವೀಸ್ ರಸ್ತೆ ಪ್ರವೇಶಿಸುವ ಮಾರ್ಗ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ: ಚಿನ್ನಪ್ಪನಹಳ್ಳಿ ರೈಲ್ವೆ ಗೇಟ್‌ ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಜೀವಿಕಾ ಆಸ್ಪತ್ರೆಯ ಸರ್ವೀಸ್ ರಸ್ತೆ ಮೂಲಕ ಸಂಚರಿಸಿ, ಕಡ್ಡಾಯವಾಗಿ ಯಮಹಾ ಶೋ ರೂಂ ಬಳಿ ಹೊರ ವರ್ತುಲ ರಸ್ತೆ ಪ್ರವೇಶಿಸಬೇಕು.

ADVERTISEMENT

ಮಹದೇವಪುರ ಮತ್ತು ಕಾರ್ತಿಕ್ ನಗರ ಹೊರ ವರ್ತುಲ ರಸ್ತೆ ಕಡೆಯಿಂದ ವೈಟ್‌ಫೀಲ್ಡ್‌, ವರ್ತೂರು ಕಡೆಗೆ ಸಂಚರಿಸುವ ವಾಹನಗಳು ಕಲಾಮಂದಿರ ಜಂಕ್ಷನ್‌ನಲ್ಲಿ ಸರ್ವೀಸ್ ರಸ್ತೆಯನ್ನು ಪ್ರವೇಶಿಸಿ, ಕುಂದಲಹಳ್ಳಿ, ವರ್ತೂರು ಕಡೆಗೆ ಸಂಚರಿಸಬಹುದು ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.