ADVERTISEMENT

ಹಲಸೂರು: ಅ.1ರವರೆಗೆ ಸೌರ ಜಾಗೃತಿ ಮೇಳ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 21:25 IST
Last Updated 29 ಸೆಪ್ಟೆಂಬರ್ 2025, 21:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಬೆಂಗಳೂರು: ಹಲಸೂರಿನ ಬಂಗಾಳಿ ಅಸೋಸಿಯೇಷನ್‌ನಲ್ಲಿ ಸೆ.29ರಿಂದ ಸೌರ ಜಾಗೃತಿ ಶಿಬಿರ ಮತ್ತು ಸಾಲ ಮೇಳ ಆರಂಭವಾಗಿದ್ದು, ಅಕ್ಟೋಬರ್‌ 1ರವರೆಗೆ ನಡೆಯಲಿದೆ. 

ಬೆಸ್ಕಾಂ, ಆದಿತ್ಯ ಇಂಪ್ಯಾಕ್ಟ್‌ ಸೋಲಾರ್ ಸೊಲ್ಯೂಷನ್ಸ್, ಕೆನರಾ ಬ್ಯಾಂಕ್‌ ಸಹಯೋಗದಲ್ಲಿ ನಡೆಯುತ್ತಿರುವ ಮೇಳದಲ್ಲಿ ಸೌರಶಕ್ತಿ ಘಟಕಗಳನ್ನು ಮನೆಯ ಮೇಲೆ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಪ್ರಧಾನಮಂತ್ರಿ ಸೂರ್ಯ ಘರ್‌ ಉಚಿತ ವಿದ್ಯುತ್ ಯೋಜನಾ ಮೇಳ ಅಗತ್ಯ ನೆರವು ಒದಗಿಸಲಿದೆ.

ADVERTISEMENT

ಜನರಿಗೆ ಸೌರಶಕ್ತಿಯ ಬಗ್ಗೆ ಜಾಗೃತಿ ಮೂಡಿಸಿ, ಚಾವಣಿ ಸೌರಫಲಕ ಅಳವಡಿಸಿಕೊಂಡರೆ ವಿದ್ಯುತ್‌ ಬಿಲ್‌ ಪಾವತಿಸುವ ಹೊರೆ ಕಡಿಮೆಯಾಗಲಿದೆ. ಹೆಚ್ಚುವರಿ ವಿದ್ಯುತ್‌ ಅನ್ನು ಮಾರಾಟ ಮಾಡಬಹುದು. ಆ ಮೂಲಕ ಸುಸ್ಥಿರ ಆರ್ಥಿಕತೆಗೂ ಸಹಾಯವಾಗಲಿದೆ ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕಿ ಉಮಾ, ಕೆನರಾ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಪ್ರಮೋದ್‌ ಸರಾಫ್‌, ಆದಿತ್ಯ ಇಂಪ್ಯಾಕ್ಟ್‌ ಸೋಲಾರ್‌ನ ಬಿಸ್ವಜಿತ್‌ ಪಾಂಡೆ, ಗುರುಪ್ರಸಾದ್‌ ಎನ್. ರಾವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.