
ಪ್ರಜಾವಾಣಿ ವಾರ್ತೆ
ದಾಬಸ್ ಪೇಟೆ: ಸೋಂಪುರ ಹೋಬಳಿಯಾದ್ಯಂತ ಹನುಮ ಜಯಂತಿ ಪ್ರಯುಕ್ತ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಚನ್ನೋಹಳ್ಳಿ, ಹಾಲೇನಹಳ್ಳಿ, ಇಮಚೇನಹಳ್ಳಿ, ಹೆಗ್ಗುಂದ, ಕೆರೆಪಾಳ್ಯ, ಕುರುವೆಲ್ ತಿಮ್ಮನಹಳ್ಳಿ, ಕುಂಟಬೊಮ್ಮನಹಳ್ಳಿ ಆಂಜನೇಯ ದೇವಾಲಯ, ನರಸೀಪುರದ ಆತ್ಮಾರಾಮ ಸ್ವಾಮಿ ದೇವಾಲಯ, ರಾಮದೇವರ ಬೆಟ್ಟ, ಆಗಳಕುಪ್ಪೆ ರಾಮದೇವರ ದೇವಸ್ಥಾನಗಳಲ್ಲಿ ಆಂಜನೇಯ ದೇವರಿಗೆ ಅಭಿಷೇಕ, ಅಲಂಕಾರ ಮಾಡಲಾಗಿತ್ತು.
ಐತಿಹಾಸಿಕ ಸಿದ್ದರ ಬೆಟ್ಟದ ಮೇಲಿನ ಆಂಜನೇಯ ದೇವಾಲಯದಲ್ಲಿ 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ಹನುಮ ಜಯಂತಿ ನಡೆಯಿತು.
ಭಕ್ತರು, ಸಾರ್ವಜನಿಕರಿಗೆ ದೇವಾಲಯಗಳಲ್ಲಿ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ಹೆಸರುಬೇಳೆ ಹಂಚಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.