ADVERTISEMENT

ಹೆಲ್ಮೆಟ್‌ ವಿತರಣೆ, ರಸ್ತೆ ಸುರಕ್ಷತೆಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 15:55 IST
Last Updated 13 ಫೆಬ್ರುವರಿ 2026, 15:55 IST
ತ್ವರ ಸಂಸ್ಥೆಯಿಂದ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು 
ತ್ವರ ಸಂಸ್ಥೆಯಿಂದ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು    

ಬೆಂಗಳೂರು: ಕಬ್ಬನ್‌ಪಾರ್ಕ್‌ ಸಂಚಾರ ಠಾಣೆ ಹಾಗೂ ‘ತ್ವರ’ ಸಂಸ್ಥೆಯ ಸಹಯೋಗದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು.

ಇದೇ ವೇಳೆ ದ್ವಿಚಕ್ರ ವಾಹನಗಳ ಮಹಿಳಾ ಸವಾರರಿಗೆ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ ಹೆಲ್ಮೆಟ್‌ ವಿತರಿಸಲಾಯಿತು. ‌

‘ತ್ವರ’ ಸಂಸ್ಥೆಯ ಸಿಇಒ ಅಲ್ಪಾನ ಪರಿದಾ ಅವರು ಮಾತನಾಡಿ, ‘ರಸ್ತೆಗಳಲ್ಲಿ ಮಹಿಳಾ ಸವಾರರು ಮತ್ತು ಹಿಂಬದಿ ಸವಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಆದರೆ, ಅವರಿಗೆಂದೇ ಪ್ರತ್ಯೇಕವಾದ ಸುರಕ್ಷತಾ ಉಪಕರಣಗಳು ದೊರೆಯುತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಹಿಂಬದಿ ಮಹಿಳಾ ಸವಾರರು ಹೆಲ್ಮೆಟ್‌ ಧರಿಸುವುದೇ ಇಲ್ಲ. ಈ ಎಲ್ಲ ಅಂಶಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.