
ಪ್ರಜಾವಾಣಿ ವಾರ್ತೆ
ಹೆಸರಘಟ್ಟ: ತೋಟಗೆರೆ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದು ತಂದೆ ಹಾಗೂ ಮಗ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಹರೀಶ್ (39) ಹಾಗೂ ಅವರ ತಂದೆ ವೀರಭದ್ರ(80) ಮೃತಪಟ್ಟಿದ್ದಾರೆ.
ತಾಯಿ ಗೌರಮ್ಮ (62), ಪತ್ನಿ ಮೈತ್ರಿ (32), ಮಗಳು ಸಿರಿ (10) ಚಿಕ್ಕಮ್ಮನ ಮಗಳು ವಂದನಾ (8) ಗಾಯಗೊಂಡಿದ್ದಾರೆ.
ಗೌರಿಬಿದನೂರಿಗೆ ಕುಟುಂಬ ಸಮೇತ ತೆರಳಿ ಜಮೀನು ನೋಡಿಕೊಂಡು ರೈಲ್ವೆ ಗೊಲ್ಲಹಳ್ಳಿಯಿಂದ ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುತ್ತಿದ್ದರು.
ತೋಟಗೆರೆ ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.