ADVERTISEMENT

ಸ್ಲೇಟ್‌ ಹಿಡಿಸಿ ಫೋಟೊ ತೆಗೆಸಬೇಡಿ: ಪೊಲೀಸ್‌ ಕ್ರಮ ರದ್ದುಪಡಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:34 IST
Last Updated 30 ಜುಲೈ 2019, 19:34 IST
   

ಬೆಂಗಳೂರು: ಜಾಮೀನು ಷರತ್ತು ಪೂರೈಸಲು ಠಾಣೆಗೆ ಬಂದ ಮಹಿಳಾ ಆರೋಪಿಗೆ ‘ಸ್ಲೇಟ್ ಹಿಡಿದು ಫೋಟೊ ತೆಗೆಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದ ಪೊಲೀಸರ ಕ್ರಮವನ್ನು ಹೈಕೋರ್ಟ್‌ ರದ್ದುಪಡಿಸಿದೆ.

‘ಸ್ಲೇಟ್ ಹಿಡಿದು ಫೋಟೊ ತೆಗೆಸಿಕೊಳ್ಳುವಂತೆ ಅರ್ಜಿದಾರ ಮಹಿಳೆಗೆ ಒತ್ತಾಯಿಸಬಾರದು. ಗುರುತು ಪತ್ತೆಗಾಗಿ ಆಕೆಯ ಆಧಾರ್ ಕಾರ್ಡ್ ಸ್ವೀಕರಿಸಬೇಕು. ಅಧೀನ ನ್ಯಾಯಾಲಯದ ನಿರ್ದೇಶನದಂತೆ ಆಕೆ ನೀಡುವ ಒಬ್ಬರ ಭದ್ರತಾ ಖಾತ್ರಿ ಒಪ್ಪಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ಪೀಠ ನಿರ್ದೇಶಿಸಿದೆ.

ಪ್ರಕರಣವೊಂದರ ಆರೋಪಿ ಮಹಿಳೆಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ವೈಯಕ್ತಿಕ ಬಾಂಡ್, ಒಬ್ಬರ ಭದ್ರತಾ ಖಾತ್ರಿ, ಗುರುತು ಪತ್ತೆಗೆ ಆಧಾರ್ ಕಾರ್ಡ್ ನೀಡಲು ಷರತ್ತು ವಿಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.