
ಬೆಂಗಳೂರು: ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿರುವ 58 ವರ್ಷದ ಮಹಿಳಾ ವೈದ್ಯರೊಬ್ಬರ ಮನವಿ ಪುರಸ್ಕೃರಿಸಿರುವ ಹೈಕೋರ್ಟ್, ಈ ಕುರಿತಂತೆ ದಾನಕ್ಕೆ ಅನುಮತಿ ನೀಡಿದೆ.
‘ನನ್ನ ಕಿಡ್ನಿ ದಾನ ಮಾಡಲು ಅನುಮತಿ ನೀಡಬೇಕು’ ಎಂದು ಕೋರಿದ್ದ 58 ವರ್ಷದ ವೈದ್ಯರೊಬ್ಬರ ಅರ್ಜಿಯನ್ನು ಅಂಗಾಂಗ ಕಸಿ ಸಮಿತಿ ತಿರಸ್ಕರಿಸಿತ್ತು.
ಈ ಕ್ರಮವನ್ನು ಪ್ರಶ್ನಿಸಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ಮನವಿ ಅಂಗೀಕರಿಸಿ ಕಾರ್ಯರೂಪಕ್ಕೆ ತರಬೇಕು’ ಎಂದು ಸಮಿತಿಗೆ ನಿರ್ದೇಶಿಸಿದೆ.
‘ಅರ್ಜಿದಾರರು ವಯಸ್ಕರು ಮತ್ತು ವೃತ್ತಿಯಲ್ಲಿ ವೈದ್ಯರಾಗಿದ್ದು, ಮೂತ್ರಪಿಂಡ ದಾನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳ ಅರಿವು ಹೊಂದಿದವರಾಗಿದ್ದಾರೆ. ಸ್ವಂತ ಇಚ್ಛೆಯಿಂದ ತಮ್ಮ ಮೂತ್ರಪಿಂಡ ದಾನ ಮಾಡಲು ಸಿದ್ಧವಾಗಿರುವ ಕಾರಣ ಅವರ ಮನವಿ ಪರಿಗಣಿಸಿ’ ಎಂದು ನ್ಯಾಯಪೀಠ ಸಮಿತಿಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.