ADVERTISEMENT

ಜಾಹೀರಾತು ತೆರಿಗೆ ಬಿಬಿಎಂಪಿಗೆ ವರ್ಗಾಯಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 16:56 IST
Last Updated 13 ಅಕ್ಟೋಬರ್ 2020, 16:56 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಜಾಹೀರಾತು ಫಲಕದಿಂದ ಸಂಗ್ರಹಿಸಿದ ₹18 ಲಕ್ಷ ತೆರಿಗೆಯನ್ನು ಬಿಬಿಎಂಪಿಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆದೇಶ ಪಾಲನೆ ಮಾಡಿರುವ ಸಂಬಂಧ ಅನುಸರಣಾ ವರದಿಯನ್ನು ಮುಂದಿನ ವಿಚಾರಣೆ(ನವೆಂಬರ್‌ 2) ವೇಳೆ ಸಲ್ಲಿಸುವಂತೆ ಆದೇಶ ನೀಡಿದೆ.

‘ಬಿಬಿಎಂಪಿಯಲ್ಲಿ ಲಭ್ಯ ಇರುವ ಸಾರ್ವಜನಿಕ ನಿಧಿ ಬಳಕೆ ಮಾಡಿಕೊಂಡು ಕೋವಿಡ್‌ ವಿರುದ್ಧ ಜಾಗೃತಿ ಸಂದೇಶ ಪ್ರದರ್ಶಿಸಲಾಗುವುದು. ಯಾವುದೇ ಖಾಸಗಿ ಕಂಪನಿಗಳ ಜಾಹೀರಾತಿಗೆ ಅವಕಾಶ ನೀಡುವುದಿಲ್ಲ’ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಜಾಗೃತಿ ಸಂದೇಶದ ಜತೆಗೆ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಅಳವಡಿಸಿದ ಕಾರಣ ಅನುಮತಿ ಹಿಂಪಡೆದ ನ್ಯಾಯಾಲಯ, ಫಲಕಗಳನ್ನು ತೆರವುಗೊಳಿಸಲು ಈ ಹಿಂದಿನ ವಿಚಾರಣೆ ವೇಳೆ ಆದೇಶಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.