ADVERTISEMENT

'ಹಿಂದುಸ್ತಾನ್ ಫೈಲ್ಸ್' ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 18:39 IST
Last Updated 14 ನವೆಂಬರ್ 2025, 18:39 IST
‘ಹಿಂದುಸ್ತಾನ್ ಫೈಲ್ಸ್: 1757–1950’ ಕಲಾಕೃತಿಗಳನ್ನು ಟಿ. ಪ್ರಭಾಕರ್, ಗಣೇಶ್ ಪ್ರತಾಪ್ ಸಿಂಗ್, ಬಸು ಆಚಾರ್ಯ, ಎಲೋರಾ ಸಿಂಗ್ ವೀಕ್ಷಿಸಿದರು
‘ಹಿಂದುಸ್ತಾನ್ ಫೈಲ್ಸ್: 1757–1950’ ಕಲಾಕೃತಿಗಳನ್ನು ಟಿ. ಪ್ರಭಾಕರ್, ಗಣೇಶ್ ಪ್ರತಾಪ್ ಸಿಂಗ್, ಬಸು ಆಚಾರ್ಯ, ಎಲೋರಾ ಸಿಂಗ್ ವೀಕ್ಷಿಸಿದರು   

ಬೆಂಗಳೂರು: ಪಶ್ಚಿಮ ಬಂಗಾಳದ ವಿರಾಸತ್ ಆರ್ಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಹಿಂದುಸ್ತಾನ್ ಫೈಲ್ಸ್: 1757–1950’ ಕಲಾಕೃತಿಗಳ ಪ್ರದರ್ಶನಕ್ಕೆ ಶುಕ್ರವಾರ ಚಿತ್ರಕಲಾ ಪರಿಷತ್ತಿನಲ್ಲಿ ಚಾಲನೆ ನೀಡಲಾಗಿದೆ.

ಭಾರತದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಲಾಪ್ರದರ್ಶನವು ನ.23ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

1757ರಲ್ಲಿ ಭಾರತದಲ್ಲಿ ಬ್ರಿಟಿಷರ ಆಡಳಿತ ಆರಂಭವಾದ ವರ್ಷ. ಅಲ್ಲಿಂದ 1950ರವರೆಗಿನ ಚಿತ್ರಣವನ್ನು ಕಟ್ಟಿಕೊಡುವ ಅಪರೂಪದ ಚಿತ್ರ, ಛಾಯಾಚಿತ್ರ, ಪತ್ರ, ಆಡಳಿತದ ದಾಖಲೆಗಳು, ಇತಿಹಾಸದ ವಸ್ತುಗಳ ಸಂಗ್ರಹವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. 250ಕ್ಕೂ ಅಧಿಕ ಕಲಾಕೃತಿಗಳು ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.

ADVERTISEMENT

ನ.17ರಂದು ಬೆಳಿಗ್ಗೆ 9.30ಕ್ಕೆ ವಿಚಾರ ಸಂಕಿರಣ ನಡೆಯಲಿದೆ. ಕಲಾವಿದರಾದ ಮೀರಾ ಚಕ್ರವರ್ತಿ, ಮನೋಹರ್‌ ಯಡವಟ್ಟಿ, ನಾನಕ್ ಗಂಗೋಪಾಧ್ಯಾಯ್‌ ಭಾಗವಹಿಸಲಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್‌ನ ಉಪಾಧ್ಯಕ್ಷ ಟಿ. ಪ್ರಭಾಕರ್ ಚಾಲನೆ ನೀಡಿದರು. ವಿರಾಸತ್ ಆರ್ಟ್ ನಿರ್ದೇಶಕ ಗಣೇಶ್ ಪ್ರತಾಪ್ ಸಿಂಗ್, ಪ್ರದರ್ಶನದ ಕ್ಯುರೇಟರ್ ಬಸು ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಎಲೋರಾ ಸಿಂಗ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.