ADVERTISEMENT

ಬೆಂಗಳೂರಿನ 29 ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ: ಆಸ್ಪತ್ರೆಗಳ ವಿವರ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 2:44 IST
Last Updated 1 ಮಾರ್ಚ್ 2021, 2:44 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 24 ಆಸ್ಪತ್ರೆಗಳು ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ಆಸ್ಪತ್ರೆಗಳನ್ನು ಮೂರನೇ ಹಂತದ ಕೋವಿಡ್‌ ಲಸಿಕೆ ವಿತರಣೆ ಅಭಿಯಾನಕ್ಕೆ ಗುರುತಿಸಲಾಗಿದೆ.

ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಕೋವಿಡೇತರ ಕಾಯಿಲೆಗಳನ್ನು ಎದುರಿಸುತ್ತಿರುವ 45ರಿಂದ 59 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ನಗರದಲ್ಲಿ ಮೊದಲ ಹಂತದಲ್ಲಿ ಗುರುತಿಸಲಾಗಿದ್ದ 2,36,157 ಆರೋಗ್ಯ ಕಾರ್ಯಕರ್ತರಲ್ಲಿ 1,05,431 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 73,871 ಮಂದಿ ಮುಂಚೂಣಿ ಯೋಧರಲ್ಲಿ 27,309 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮೂರನೇ ಹಂತದ ಅಭಿಯಾನಕ್ಕೆ 20ಕ್ಕೂ ಅಧಿಕ ಖಾಸಗಿ ಅಸ್ಪತ್ರೆಗಳನ್ನು ಗುರುತಿಸಲಾಗಿದೆ.

*ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

ADVERTISEMENT

*ನಾರಾಯಣ ಹೃದಯಾಲಯ

*ಆನೇಕಲ್ ತಾಲ್ಲೂಕು ಆಸ್ಪತ್ರೆ

*ಕೃಷ್ಣರಾಜಪುರ ತಾಲ್ಲೂಕು ಆಸ್ಪತ್ರೆ

*ಯಲಹಂಕ ತಾಲ್ಲೂಕು ಆಸ್ಪತ್ರೆ

*ಕೆ.ಸಿ. ಜನರಲ್ ಆಸ್ಪತ್ರೆ

*ಜಯನಗರ ಸಾರ್ವಜನಿಕ ಆಸ್ಪತ್ರೆ

*ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

*ಬೌರಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

*ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ

*ವಿಕ್ರಮ್ ಆಸ್ಪತ್ರೆ

*ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆ

*ರಾಘವೇಂದ್ರ ಪೀಪಲ್ ಟ್ರೀ ಆಸ್ಪ‍ತ್ರೆ

*ಸಪ್ತಗಿರಿ ವೈದ್ಯಕೀಯ ಕಾಲೇಜು

*ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಯಶವಂತಪುರ

*ಅಪೋಲೊ ಆಸ್ಪತ್ರೆ, ಶೇಷಾದ್ರಿಪುರ

*ಕೊಲಂಬಿಯಾ ಏಷ್ಯಾ, ಸರ್ಜಾಪುರ

*ಕೊಲಂಬಿಯಾ ಏಷ್ಯಾ ವೈಟ್‌ ಫೀಲ್ಡ್

*ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ

*ಅಪೋಲೊ ಆಸ್ಪ‍ತ್ರೆ, ಬನ್ನೇರುಘಟ್ಟ ರಸ್ತೆ

*ಸ್ಪರ್ಶ ಆಸ್ಪತ್ರೆ, ಆರ್‌.ಆರ್. ನಗರ

*ಬಿಜಿಎಸ್‌ ಜಿಐಎಂಎಸ್

*ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಹೆಬ್ಬಾಳ

*ಆಸ್ಟರ್ ಸಿಎಂಐ ಆಸ್ಪತ್ರೆ, ಹೆಬ್ಬಾಳ

*ಅಪೋಲೊ ಆಸ್ಪತ್ರೆ, ಜಯನಗರ

*ದಯಾನಂದ ಸಾಗರ್ ಆಸ್ಪತ್ರೆ, ಕುಮಾರಸ್ವಾಮಿ ಬಡಾವಣೆ*ಮಲ್ಲಿಗೆ ಆಸ್ಪತ್ರೆ

*ಸುಶ್ರೂಷ ಆಸ್ಪತ್ರೆ,*ಎಂ.ಎಸ್. ರಾಮಯ್ಯ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.