ADVERTISEMENT

HSRP ನಕಲಿ ಪೋರ್ಟಲ್ ಲಿಂಕ್‌ ಕ್ಲಿಕ್ಕಿಸಿದ ವ್ಯಕ್ತಿ: ₹95 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 1:27 IST
Last Updated 1 ಆಗಸ್ಟ್ 2024, 1:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಚ್‌ಎಸ್‌ಆರ್‌ಪಿ ನೋಂದಣಿ ಸಂಖ್ಯೆ ಪಡೆಯಲು ನಕಲಿ ಪೋರ್ಟಲ್‌ನ ಲಿಂಕ್‌ ಕ್ಲಿಕ್ಕಿಸಿದ ವ್ಯಕ್ತಿಯೊಬ್ಬರು ₹95 ಸಾವಿರ ಕಳೆದುಕೊಂಡಿದ್ದಾರೆ.

ಈ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ 42 ವರ್ಷದ ವ್ಯಕ್ತಿಯೊಬ್ಬರು ಜುಲೈ 9ರಂದು ಅಂತರ್ಜಾಲದ ಮೂಲಕ ‘ಬುಕ್‌ ಮೈ ಎಚ್‌ಎಸ್‌ಆರ್‌ಪಿ.ನೆಟ್‌’ ಎಂಬ ವೈಬ್‌ಸೈಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಸಂಖ್ಯೆಯನ್ನು ಬುಕ್‌ ಮಾಡಿದ್ದರು. ಜುಲೈ 16ರಂದು ನಿಮ್ಮ ವಿಳಾಸ ಸರಿಯಾಗಿಲ್ಲವೆಂದು ಅಪರಿಚಿತರು ದೂರುದಾರರಿಗೆ ಸಂದೇಶ ಕಳುಹಿಸಿದ್ದರು. ನಿಮ್ಮ ವಿಳಾಸ ಸರಿ ಇಲ್ಲದ ಕಾರಣ ನೀವು ಬುಕ್‌ ಮಾಡಿರುವ ಎಚ್‌ಎಸ್‌ಆರ್‌ಪಿ ಸಂಖ್ಯೆ ಉಗ್ರಾಣದಲ್ಲಿ ಉಳಿದುಕೊಂಡಿದೆ. ‌ನಿಮಗೆ ಕಳಿಸಿರುವ ಸಂದೇಶದಲ್ಲಿನ ಲಿಂಕ್‌ ಒತ್ತಿ ನಿಮ್ಮ ಸಂಪೂರ್ಣ ವಿಳಾಸ ಹಾಕುವಂತೆ ಅಪರಿಚಿತರು ಮೇಲ್‌ ಕಳುಹಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಆರೋಪಿಗಳು ಕಳಿಸಿದ್ದ ಸಂದೇಶಕ್ಕೆ ಪ್ರತಿಕ್ರಿಯೆಸಿದ್ದ ದೂರುದಾರರು ಲಿಂಕ್‌ ಅನ್ನು ಒತ್ತುವ ಮೂಲಕ ತಮ್ಮ ವಿಳಾಸವನ್ನು ಭರ್ತಿ ಮಾಡಿದ್ದರು. ಜುಲೈ 21ರಂದು ದೂರುದಾರರ ಕ್ರೆಡಿಟ್‌ ಕಾರ್ಡ್‌ನಿಂದ ಒಮ್ಮೆ ₹54,773.97 ಹಾಗೂ ಇನ್ನೊಮ್ಮೆ ₹ 41,080.48ರಂತೆ ಆರೋಪಿಗಳು ಒಟ್ಟು ₹95,857 ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಈ ಬಗ್ಗೆ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.