ADVERTISEMENT

ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 21:31 IST
Last Updated 6 ನವೆಂಬರ್ 2022, 21:31 IST

ಬೆಂಗಳೂರು: ನಗರದಲ್ಲಿ ಮೂರು ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ದಾಳಿ ಮಾಡಿದ್ದು, ಮಾಲೀಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಮಾಹಿತಿ ಇತ್ತು. ಹೀಗಾಗಿ, ಜೀವನ್‌ಬಿಮಾನಗರದ ಕಶೀಶ್ ಕೆಫೆ, ಕಮರ್ಷಿಯಲ್
ಸ್ಟ್ರೀಟ್‌ನ ಬುರ್ನೌಟ್ ಕೆಫೆ ಹಾಗೂ ಮಡಿವಾಳದ ದಿ ಎಮಿರೆಟ್ಸ್ ಶೇಷಾ ಹೋಟೆಲ್‌ ಆ್ಯಂಡ್ ರೆಸ್ಟೋರೆಂಟ್‌ನ ಹುಕ್ಕಾ ಬಾರ್ ಮೇಲೆ ದಾಳಿ ಮಾಡಲಾಗಿದೆ. ನಗದು, ಹುಕ್ಕಾ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದುಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT