ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಯುಪಿಎಸ್‌ಸಿ ಸಿಎಸ್‌ಇ–2024) ಐಎಎಸ್ ಬಾಬಾ ಕೋಚಿಂಗ್ ಸಂಸ್ಥೆಯು ದೇಶ ಮತ್ತು ರಾಜ್ಯದಲ್ಲಿ ಅಗ್ರ ರ‍್ಯಾಂಕ್‌ಗಳನ್ನು ಪಡೆದಿದೆ.
ಐಎಎಸ್ ಬಾಬಾದ ಆರ್‌ಆರ್‌ಎಸ್ ಮತ್ತು ಇಂಟರ್ವ್ಯೂ ಮೆಂಟರ್‌ಶಿಪ್ ಪ್ರೋಗ್ರಾಂನ (ಐಎಂಪಿ) ವಿದ್ಯಾರ್ಥಿ ಶಕ್ತಿ ದುಬೆ ದೇಶದ ಮೊದಲನೇ ರ‍್ಯಾಂಕ್ ಪಡೆದಿದ್ದಾರೆ. ಐಎಂಪಿ ವಿದ್ಯಾರ್ಥಿ ಆರ್. ರಂಗಮಂಜು ದೇಶದ 24ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಮೊದಲನೆಯವರಾಗಿದ್ದಾರೆ.
ಅಭಿಷೇಕ್ ವಸಿಷ್ಠ 14, ಮಾಧವ್ ಅಗರ್ವಾಲ್ 16 ಮತ್ತು ಸಂಸ್ಕೃತಿ ತ್ರಿವೇದಿ 17 ರ‍್ಯಾಂಕ್ ಪಡೆದಿದ್ದಾರೆ. ಅಗ್ರ 20 ರ‍್ಯಾಂಕುಗಳಲ್ಲಿ ಐಎಎಸ್ ಬಾಬಾ 4 ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದೆ. ಅಗ್ರ ನೂರು ರ‍್ಯಾಂಕುಗಳಲ್ಲಿ 20ಕ್ಕೂ ಹೆಚ್ಚು ರ‍್ಯಾಂಕ್‌ಗಳು ಹಾಗೂ ದೇಶದಾದ್ಯ೦ತ 210ಕ್ಕೂ ಹೆಚ್ಚು ಆಯ್ಕೆಗಳನ್ನು ಗಳಿಸಿದೆ.
ಕರ್ನಾಟಕಕ್ಕೆ ಬಂದಿರುವ 30 ಸ್ಥಾನಗಳಲ್ಲಿ ಐಎಎಸ್ ಬಾಬಾ ಸಂಸ್ಥೆಯು 22 ರ‍್ಯಾಂಕ್‌ಗಳನ್ನು ಪಡೆದಿದೆ ಎಂದು ಐಎಎಸ್ ಬಾಬಾ ಸಂಸ್ಥಾಪಕ ಮೋಹನ್ ಕುಮಾರ್ ಎಸ್. ತಿಳಿಸಿದ್ದಾರೆ.
ಕರ್ನಾಟಕದಿಂದ ರ‍್ಯಾಂಕ್ ಪಡೆದವರು: ಆರ್. ರಂಗಮಂಜು (24ನೇ ರ‍್ಯಾಂಕ್), ಅನುಪ್ರಿಯಾ ಸಾಕ್ಯಾ (120), ಶ್ರೇಯನ್ಸ್ ಗೋಮ್ಸ್ (372), ಬಿ.ಎಂ. ಮೇಘನಾ (425), ಮಾಧವಿ ಆರ್. (446) ಮಹೇಶ್ ಆರ್. ಮಡಿವಾಳರ್ (482), ಭಾನುಪ್ರಕಾಶ್ ಜೆ. (523), ಪಾಂಡುರಂಗ ಎಸ್. ಕಂಬಳಿ (529), ಅಭಿಶೀಲ್ ಜೈಸ್ವಾಲ್ (538), ಶ್ರೇಯಸ್ ರಾವ್ ಜಿ. (552), ವರುಣ್ ಕೆ. ಗೌಡ (565), ಭರತ್ ಸಿಯರಂ (567), ಸಂಪ್ರೀತ್ ಸಂತೋಷ್ (652), ನಿತಿನ್ ಎಚ್.ಆರ್. (692), ನಿಖಿಲ್ ಎಂ.ಆರ್. (724), ತನಕಾ ಡಿ. ಆನಂದ್ (812), ಸಿದ್ದಲಿಂಗಪ್ಪ ಕೆ. ಪೂಜಾರ (826), ವಿನುತ ಜಿ.ಆರ್. (906), ಕಾರ್ತಿಕ್ ಡಿ. (918), ನವೀನ್‌ರಾಜ್ ಸಿ. (968), ಲಾವಣ್ಯ ಎಸ್.ಪಿ. (969), ಮೋಹನ್ (984).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.