ADVERTISEMENT

15 ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 19:46 IST
Last Updated 20 ಫೆಬ್ರುವರಿ 2019, 19:46 IST

ಬೆಂಗಳೂರು: ಹದಿಮೂರು ಮಂದಿ ಐಎಎಸ್‌ ಸೇರಿ ಒಟ್ಟು 15 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು: ತುಷಾರ್‌ ಗಿರಿನಾಥ್– ಪ್ರಾದೇಶಿಕ ಆಯುಕ್ತ –ಬೆಳಗಾವಿ ವಿಭಾಗ, ಹೆಚ್ಚುವರಿಯಾಗಿ ಬೆಂಗಳೂರು ಜಲ ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಎಸ್‌.ಬಿ. ಶೆಟ್ಟಣ್ಣವರ– ವ್ಯವಸ್ಥಾಪಕ ನಿರ್ದೇಶಕ, ಮೈಸೂರು ಪೇಪರ್‌ ಮಿಲ್ಸ್‌ ಲಿ., ಬಗಾದಿ ಗೌತಮ್‌– ಜಿಲ್ಲಾಧಿಕಾರಿ, ಚಿಕ್ಕಮಗಳೂರು, ಎಸ್‌.ಎಸ್‌. ನಕುಲ್‌– ನಿರ್ದೇಶಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಎಂ.ಕೆ. ಶ್ರೀರಂಗಯ್ಯ– ಆಯುಕ್ತರು, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿ.ಎನ್‌. ಶಿವಮೂರ್ತಿ– ಜಿಲ್ಲಾಧಿಕಾರಿ, ದಾವಣಗೆರೆ, ಎಸ್‌. ಅಶ್ವತಿ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ, ಜಿ.ಆರ್‌.ಜೆ. ದಿವ್ಯಪ್ರಭು– ಆಯುಕ್ತರು, ಹಂಪಿ ವಿಶ್ವ ಪಾರಂಪರಿಕ ವ್ಯವಸ್ಥಾಪನಾ ಪ್ರಾಧಿಕಾರ, ಎಚ್‌. ಬಸವರಾಜೇಂದ್ರ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಾವಣಗೆರೆ ಜಿಲ್ಲಾ ಪಂಚಾಯಿತಿ, ಜಿ.ಸಿ. ವೃಷಭೇಂದ್ರ ಮೂರ್ತಿ– ನಿರ್ದೇಶಕರು, ಸಣ್ಣ , ಕಿರು ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ), ಡಾ.ಕೆ. ಹರೀಶ್‌ ಕುಮಾರ್‌– ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ, ವೈ.ಎಸ್‌. ಪಾಟೀಲ– ಜಿಲ್ಲಾಧಿಕಾರಿ, ವಿಜಯಪುರ, ಸಿ. ಸತ್ಯಭಾಮಾ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಾಮರಾಜನಗರ, ಜಿಲ್ಲಾ ಪಂಚಾಯಿತಿ, ಜಹೀರಾ ನಸೀಮ್ (ಕೆಎಎಸ್‌)– ವ್ಯವಸ್ಥಾಪಕ ನಿರ್ದೇಶಕರು, ಈಶಾನ್ಯ ಸಾರಿಗೆ ನಿಗಮ, ಡಾ.ಕೆ.ಎನ್‌. ವಿಜಯಪ್ರಕಾಶ್‌– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಸನ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT