ADVERTISEMENT

ಆರೋಗ್ಯ ಕ್ಷೇತ್ರಕ್ಕೆ ಇಫ್ತಿಕಾರ್‌ ಕೊಡುಗೆ ಅಪಾರ: ಡಾ.ಅನುಭಾ ಸಿಂಗ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:27 IST
Last Updated 27 ಆಗಸ್ಟ್ 2024, 15:27 IST
ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿಸ್ಸಾರ್‌ ಅಹಮದ್‌ ಅವರು, ಶಿಕ್ಷಣತಜ್ಞ ಪ್ರೊ.ಡಾ.ಯು.ಟಿ.ಇಫ್ತಿಕಾರ್‌ ಅಲಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿಸ್ಸಾರ್‌ ಅಹಮದ್‌ ಅವರು, ಶಿಕ್ಷಣತಜ್ಞ ಪ್ರೊ.ಡಾ.ಯು.ಟಿ.ಇಫ್ತಿಕಾರ್‌ ಅಲಿ ಅವರನ್ನು ಸನ್ಮಾನಿಸಿದರು.   

ಯಲಹಂಕರಾಷ್ಟ್ರೀಯ ಅಲೈಡ್‌ ಮತ್ತು ಹೆಲ್ತ್‌ಕೇರ್‌ ಪ್ರೊಫೆಶನ್ಸ್ ಅಡಿಯಲ್ಲಿ ಸ್ಥಾಪಿಸಲಾದ ಅಲೈಡ್‌ ಮತ್ತು ಹೆಲ್ತ್‌ಕೇರ್‌ ಕೌನ್ಸಿಲ್‌ ಕರ್ನಾಟಕದ ಅಧ್ಯಕ್ಷರಾಗಿ  ನೇಮಕಗೊಂಡಿರುವ ಶಿಕ್ಷಣತಜ್ಞ ಡಾ.ಯು.ಟಿ.ಇಫ್ತಿಕಾರ್‌ ಅಲಿ ಅವರನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಿಂದ ಸನ್ಮಾನಿಸಲಾಯಿತು.

ಕರ್ನಾಟಕದಾದ್ಯಂತ ಎಲ್ಲಾ ಅಲೈಡ್‌ ಮತ್ತು ಪ್ಯಾರಾಮೆಡಿಕಲ್‌ ಕೋರ್ಸ್‌ ಕಾಲೇಜುಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.

ಈ ವೇಳೆ ಮಾತನಾಡಿದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ನಿಸಾರ್‌ ಅಹಮದ್‌, ಕೋವಿಡ್‌ ಬಿಕ್ಕಟ್ಟಿನಲ್ಲಿ ರಾಜ್ಯದ ಜನರ ಆರೋಗ್ಯ ರಕ್ಷಣೆಗಾಗಿ ಡಾ. ಇಫ್ತಿಕಾರ್‌ ಅಲಿ ಅವರು ನಿರ್ವಹಿಸಿದ ಕಾರ್ಯವನ್ನು ಸ್ಮರಿಸಿದರು.

ADVERTISEMENT

ಕುಲಪತಿ ಡಾ.ಅನುಭಾ ಸಿಂಗ್‌ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಇಫ್ತಿಕಾರ್‌ ಅವರ ಕೊಡುಗೆ ಅಪಾರವಾಗಿದ್ದು, ಸಮಾಜದ ಒಳಿತಿಗಾಗಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಅವರು ಈಗ ಇನ್ನಷ್ಟು ಸಹಕಾರಿಯಾಗಲಿದ್ದಾರೆ ಎಂದರು.

ಪ್ರೆಸಿಡೆನ್ಸಿ ಸಮೂಹ ಶಿಕ್ಷಣಸಂಸ್ಥೆಯ ಉಪಾಧ್ಯಕ್ಷ ಸಲ್ಮಾನ್‌ ಅಹಮದ್‌, ಕ್ಯಾಲಿಕಟ್‌ನ ಮರ್ಕಝ್‌ ನಾಲೆಡ್ಜ್‌ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಮುಹಮ್ಮದ್‌ ಅಬ್ದುಲ್‌ ಹಕ್ಕೀಂ ಅಝ್ಹರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.