ADVERTISEMENT

ಆನ್‌ಲೈನ್‌ನಲ್ಲಿ ಐಐಐಟಿ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 20:55 IST
Last Updated 9 ಆಗಸ್ಟ್ 2020, 20:55 IST
ಪ್ರೊ.ಎಸ್. ಸಡಗೋಪನ್‌ 
ಪ್ರೊ.ಎಸ್. ಸಡಗೋಪನ್‌    

ಬೆಂಗಳೂರು: ನಗರದ ಅಂತರರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ–ಬಿ) ಘಟಿಕೋತ್ಸವ ಭಾನುವಾರ ಆನ್‌ಲೈನ್‌ನಲ್ಲಿ ನಡೆಯಿತು. ಸಂಸ್ಥೆಯ ಇತಿಹಾಸದಲ್ಲಿಯೇ ಅತಿದೊಡ್ಡ ಘಟಿಕೋತ್ಸವ ಎನ್ನಲಾದ ಈ ಕಾರ್ಯಕ್ರಮದಲ್ಲಿ, 2,800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ದತ್ತಾಂಶ ವಿಜ್ಞಾನ, ಮಷಿನ್‌ ಲರ್ನಿಂಗ್‌ (ಎಂಎಲ್‌) ಹಾಗೂ ಕೃತಕ ಬುದ್ಧಿಮತ್ತೆ ಮತ್ತು ತಂತ್ರಾಂಶ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಪಡೆದವರಿಗೆ ಪ್ರಮಾಣಪತ್ರ ನೀಡಲಾಯಿತು. ನಿರ್ದಿಷ್ಟ ಕೋರ್ಸ್‌ಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ 20 ವಿದ್ಯಾರ್ಥಿಗಳು ವಿಶೇಷ ಪುರಸ್ಕಾರ ಪಡೆದರು.

ಇನ್ಫೋಸಿಸ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಪ್ರವೀಣ್‌ ರಾವ್, ‘ಸಂದರ್ಭಕ್ಕೆ ತಕ್ಕಂತೆ ಕಂಪನಿಗಳು ಬದಲಾಗುತ್ತಿರುವ ಈ ಕಾಲದಲ್ಲಿ, ವಿದ್ಯಾರ್ಥಿಗಳು ಕೂಡ ಪ್ರಸ್ತುತ ಸ್ಥಿತಿಗೆ ಒಗ್ಗಿಕೊಳ್ಳಬೇಕಾಗಿದೆ. ಕಡಿಮೆ ಅವಧಿಯಲ್ಲಿ ಹೊಸ ಕೌಶಲಗಳನ್ನು ಕಲಿಯಬೇಕಾಗಿದೆ’ ಎಂದರು.

ADVERTISEMENT

ಐಐಐಟಿ–ಬಿ ನಿರ್ದೇಶಕ ಪ್ರೊ. ಎಸ್. ಸಡಗೋಪನ್‌, ‘ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವ ಬೆಳೆಸುವಲ್ಲಿ ಸಂಸ್ಥೆಯು ಶ್ರಮಿಸುತ್ತಿದೆ. ಹೊಸ ಕಾಲದ ಸಾಧನಗಳೊಂದಿಗೆ ಶಿಕ್ಷಣವನ್ನು ಪಡೆಯಲು ಅಪ್‌ಗ್ರ್ಯಾಡ್‌ ಹೊಸ ವೇದಿಕೆ ಕಲ್ಪಿಸಿದೆ. ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಶ್ರಮಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.