ADVERTISEMENT

ಐಐಐಟಿ: ಮಾರ್ಚ್‌ 22ರಿಂದ ಉದ್ದಿಮೆಶೀಲತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:33 IST
Last Updated 14 ಮಾರ್ಚ್ 2024, 16:33 IST
   

ಬೆಂಗಳೂರು: ಇಂಟರ್‌ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಜಿ (ಐಐಐಟಿ-ಬಿ) ಮಾರ್ಚ್‌ 22, 23ರಂದು  ಸಂಶೋಧನೆ, ನಾವೀನ್ಯ, ಸಮಾಜ ಮತ್ತು ಉದ್ದಿಮೆಶೀಲತಾ (ರೈಸ್) ಸಮಾವೇಶ ಹಮ್ಮಿಕೊಂಡಿದೆ.

ಉದ್ದಿಮೆಗಳಲ್ಲಿನ ಪರಿಣತರು, ಶಿಕ್ಷಣ ಕ್ಷೇತ್ರದ ತಜ್ಞರು, ಚಿಂತಕರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಐಐಐಟಿ–ಬಿ ನಿರ್ದೇಶಕ ದೇಬಬೃತ ದಾಸ್‌ ಹೇಳಿದ್ದಾರೆ.

ಸಂಶೋಧನೆ, ನಾವೀನ್ಯ ಮತ್ತು ಉದ್ದಿಮೆಶೀಲತೆಯ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚೆ, ಸಂವಾದ ನಡೆಯಲಿದೆ. ಭಾರತೀಯ ನವೋದ್ಯಮಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಹಂತಕ್ಕೆ ಬೆಳೆಯಲು ಭಾರತೀಯ ನವೋದ್ಯಮ ಸುಸ್ಥಿರ ಮತ್ತು ಸದೃಢವಾದ ಬೆಳವಣಿಗೆ ಕಾಣಲು ಅಗತ್ಯವಾದ ತಂತ್ರಗಳ ಬಗ್ಗೆ ಸಮಾವೇಶದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.

ADVERTISEMENT

ಶಿಕ್ಷಣ ಸಂಸ್ಥೆಗಳು ನಾವೀನ್ಯ ಮತ್ತು ಉದ್ದಿಮೆಶೀಲತೆಯ ಮೂಲ ಕೇಂದ್ರಗಳಾಗಿ ಹೊರಹೊಮ್ಮಬೇಕು ಎನ್ನುವುದು ಈ ಸಮಾವೇಶದ ಉದ್ದೇಶ. ‌ಆಸಕ್ತ ವಿದ್ಯಾರ್ಥಿಗಳು ಐಐಐಟಿಯ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.