ADVERTISEMENT

ಕ್ವಾಂಟಮ್‌ ರಿಸರ್ಚ್ ಪಾರ್ಕ್‌ ಅಭಿವೃದ್ಧಿಗೆ ₹48 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 19:26 IST
Last Updated 10 ಜುಲೈ 2025, 19:26 IST

ನಗರದ ಐಐಎಸ್‌ಸಿ ಆವರಣದಲ್ಲಿರುವ ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ಗೆ ಸಚಿವ ಎನ್‌.ಎಸ್‌. ಬೋಸರಾಜು ಅವರು ಗುರುವಾರ ಭೇಟಿ ಮಾಡಿ, ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಪ್ರೊ. ಅರಿಂದಮ್ ಘೋಷ್, ಜಿ.ಕುಮಾರ ನಾಯಕ ಇದ್ದಾರೆ

ನಗರದ ಐಐಎಸ್‌ಸಿ ಆವರಣದಲ್ಲಿರುವ ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ಗೆ ಸಚಿವ ಎನ್‌.ಎಸ್‌. ಬೋಸರಾಜು ಅವರು ಗುರುವಾರ ಭೇಟಿ ಮಾಡಿ, ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಪ್ರೊ. ಅರಿಂದಮ್ ಘೋಷ್, ಜಿ.ಕುಮಾರ ನಾಯಕ ಇದ್ದಾರೆ

ಬೆಂಗಳೂರು: ದೇಶದ ಕ್ವಾಂಟಮ್‌ ಕ್ಷೇತ್ರದ ಬೆಳವಣಿಗೆಯಲ್ಲಿ ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ ಮುಂದಾಳತ್ವವನ್ನು ವಹಿಸುವ ಸಾಮರ್ಥ್ಯವನ್ನು ಐಐಎಸ್‌ಸಿ ಹೊಂದಿದ್ದು, ಇದರ ಅಭಿವೃದ್ದಿಗಾಗಿ ₹ 48 ಕೋಟಿ ನೀಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ADVERTISEMENT

ಐಐಎಸ್‌ಸಿ ಆವರಣದಲ್ಲಿರುವ ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ಗೆ ಗುರುವಾರ ಭೇಟಿ ನೀಡಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೀಲನಕ್ಷೆ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

ಕ್ವಾಂಟಮ್‌ ಪಾರ್ಕ್‌ನಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಸಂಶೋಧನಾ ಸಲಕರಣೆಗಳು, ಪ್ರಯೋಗಾಲಯಗಳು, ಇನ್ ಕ್ಯುಬೇಟರ್ನಂಥ ಸಕಲ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ₹ 48 ಕೋಟಿ ಅನುದಾನ ನೀಡಲಾಗಿದೆ. ಈ ಸಂಸ್ಥೆ ದೇಶದ ಕ್ವಾಂಟಮ್‌ ಕ್ಷೇತ್ರದ ಬೆಳವಣಿಗೆಯ ನಾಯಕತ್ವ ವಹಿಸುವಂತಹ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸಂಸ್ಥೆಯ ಅಭಿವೃದ್ದಿಗೆ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ದವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ನಗರವನ್ನು ದೇಶದ ಕ್ವಾಂಟಮ್‌ ಹಬ್ ಮಾಡುವ ನಿಟ್ಟಿನಲ್ಲಿ ಜುಲೈ 31 ಹಾಗೂ ಆಗಸ್ಟ್‌ 1ರಂದು ‘ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶ’ ಆಯೋಜಿಸಲಾಗಿದೆ ಎಂದರು.

ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ನ ಮುಖ್ಯಸ್ಥ ಪ್ರೊ. ಅರಿಂದಮ್ ಘೋಷ್ ಮಾತನಾಡಿ, ‘ಬೆಂಗಳೂರು ನಗರ ಕ್ವಾಂಟಮ್‌ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಹೊಂದಿದೆ. ನಗರದಲ್ಲಿರುವ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಳ್ಳುವುದರಿಂದ 2035ರ ಒಳಗಾಗಿ ‘ಕ್ವಾಂಟಮ್‌ ಅಡ್ವಾಂಟೇಜ್‌ ಡ್ರಿವನ್‌ ಎಕಾನಮಿ ಇನ್‌ ಕರ್ನಾಟಕ’ ರಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡಿರುವ ಸಲಹಾ ಸಮಿತಿ ರಚಿಸುವ ಅಗತ್ಯವಿದೆ’ ಎಂದು ಹೇಳಿದರು.

ರಾಯಚೂರ ಸಂಸದ ಜಿ. ಕುಮಾರ ನಾಯಕ, ಕೆಸ್ಟೆಪ್ಸ್‌ ನಿರ್ದೇಶಕ ಸದಾಶಿವ ಪ್ರಭು, ಐಐಎಸ್‌ಸಿ ನಿರ್ದೇಶಕರಾದ ರಂಗರಾಜನ್, ಪ್ರೊ. ಅಕ್ಷಯ ನಾಯಕ್, ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.