ADVERTISEMENT

ಕಾಕಂಬಿ ರಫ್ತಿನಲ್ಲೂ ಅಕ್ರಮ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:28 IST
Last Updated 1 ಮಾರ್ಚ್ 2023, 6:28 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಅಬಕಾರಿ ಇಲಾಖೆಯಲ್ಲಿ ಕಾಕಂಬಿ ರಫ್ತಿನಲ್ಲೂ ಅಕ್ರಮ ನಡೆದಿದ್ದು, ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಈ ಬಗ್ಗೆ ಚರ್ಚೆ ಮಾಡದೆ, ಟಿಪ್ಪು ವರ್ಸಸ್ ಸಾವರ್ಕರ್‌, ಟಿಪ್ಪು ವರ್ಸಸ್ ಅಬ್ಬಕ್ಕ ಬಗ್ಗೆ ಮಾತನಾಡುತ್ತಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ದೂರಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬೈಯ ಕೆ.ಎನ್. ರಿಸೋರ್ಸಸ್ ಎಂಬ ಕಂಪನಿ ಯಾವುದೇ ದಾಖಲೆ ಇಲ್ಲದೆ ಸೆಪ್ಟೆಂಬರ್‌ನಲ್ಲಿ 2 ಲಕ್ಷ ಟನ್ ರಫ್ತಿಗೆ ಅನುಮತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲಿ ಮಲ್ಪೆ ಬಂದರು ಇದ್ದರೂ ಗೋವಾದಿಂದ ರಫ್ತಿಗೆ ಅನುಮತಿ ನೀಡಿರುವುದೇಕೆ? ₹2 ಲಕ್ಷ ಕೋಟಿ ಎಂದು ಲೆಕ್ಕ ಹಾಕಿದರೂ ಶೇ 40 ಕಮಿಷನ್‌ನಂತೆ ₹80 ಕೋಟಿಗೆ ಡೀಲ್ ಆಗಿದೆ’ ಎಂದು ದೂರಿದರು.

‘ಈ ಸಂಬಂಧ ಅವರು ಆಡಿಯೊ ತುಣುಕೊಂದನ್ನು ಕೇಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.