ADVERTISEMENT

ಐಎಂಎ ಪ್ರಕರಣ: ಹಿಂದೆ ಸರಿದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:14 IST
Last Updated 23 ನವೆಂಬರ್ 2019, 5:14 IST
   

ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಪ್ರಕರಣದ ವಿಚಾರಣೆಯಿಂದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಹಿಂದೆ ಸರಿದಿದ್ದಾರೆ.

ವಿವಿಧ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿ ದ್ದವು. ಅರ್ಜಿ ವಿಚಾರಣೆ ತಾವಿ ರುವ ನ್ಯಾಯಪೀಠದಲ್ಲಿ ಬೇಡ ಎಂದು ನ್ಯಾ. ಯೆರೂರ್ ಮನವಿ ಮಾಡಿದರು. ಹೀಗಾಗಿ ಎಲ್ಲಾ ಅರ್ಜಿಗಳನ್ನು ನ್ಯಾ.ಯೆರೂರ್ ಅವರು ಇಲ್ಲದ ನ್ಯಾಯಪೀಠದಲ್ಲಿ ವಿಚಾರಣೆ ಬರುವಂತೆ ಬೇರೆ ನ್ಯಾಯಪೀಠ ರಚಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿ, ಮುಖ್ಯ ನ್ಯಾಯಮೂರ್ತಿ ಅವರು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT