ADVERTISEMENT

‘ಮ್ಯೂಸಿಕ್‌ ಮ್ಯೂಸಿಯಂ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:02 IST
Last Updated 28 ಜುಲೈ 2019, 19:02 IST
ಐಎಂಇಯನ್ನು ತಬಲಾ ವಾದಕ ಝಾಕೀರ್‌ ಹುಸೇನ್‌ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಸಿಂಗ್‌ ಪಟೇಲ್‌, ಡಿ.ವಿ. ಸದಾನಂದ ಗೌಡ, ಬಿಜೆಪಿ ನೇತಾರ ಎಸ್.ಎಂ. ಕೃಷ್ಣ ಇದ್ದಾರೆ
ಐಎಂಇಯನ್ನು ತಬಲಾ ವಾದಕ ಝಾಕೀರ್‌ ಹುಸೇನ್‌ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಸಿಂಗ್‌ ಪಟೇಲ್‌, ಡಿ.ವಿ. ಸದಾನಂದ ಗೌಡ, ಬಿಜೆಪಿ ನೇತಾರ ಎಸ್.ಎಂ. ಕೃಷ್ಣ ಇದ್ದಾರೆ   

ಬೆಂಗಳೂರು: ದೇಶದ ಮೊದಲ ಸಂವಾದಾತ್ಮಕ ಸಂಗೀತ ಸಂಗ್ರಹಾಲಯ ‘ಇಂಡಿಯನ್‌ ಮ್ಯೂಸಿಕ್‌ ಎಕ್ಸ್‌ಪಿರಿಯನ್ಸ್‌’ (ಐಎಂಇ) ಶನಿವಾರ ಉದ್ಘಾಟನೆಯಾಯಿತು.

ಜೆ.ಪಿ. ನಗರದ 7ನೇ ಹಂತದ ಬ್ರಿಗೇಡ್‌ ಮಿಲೇನಿಯಂ ಎನ್‌ಕ್ಲೇವ್‌ನಲ್ಲಿರುವ ಈ ಐಎಂಇ, ಲಾಭರಹಿತ ಟ್ರಸ್ಟ್‌ ಆಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ವಿವಿಧ ಕಂಪನಿಗಳ ಸಹಕಾರದಿಂದ ನಿರ್ಮಿಸಲಾಗಿದೆ.

ADVERTISEMENT

ಐಎಂಇ ನಿರ್ದೇಶಕಿ ಮಾನಸಿ ಪ್ರಸಾದ್, ‘ಇಡೀ ಜಗತ್ತಿನಲ್ಲಿ ಭಾರತವು ಅತ್ಯಂತ ವೈವಿಧ್ಯಮಯ ಸಂಗೀತ ಸಂಸ್ಕೃತಿಯನ್ನು ಹೊಂದಿದೆ. ಸಂಗೀತ ಶಿಕ್ಷಣ ಮತ್ತು ಸಂಶೋಧನೆಯ ಕೇಂದ್ರವಾಗುವ ಗುರಿಯನ್ನು ಐಎಂಇ ಹೊಂದಿದೆ’ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ತಬಲಾ ವಾದಕ ಝಾಕೀರ್ ಹುಸೇನ್ ಹಾಗೂ ಜಾಸ್ ನ ಲೂಯಿಸ್ ಬ್ಯಾಂಕ್ಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಐಎಂಇಯಲ್ಲಿ ಏನೇನಿದೆ?
* 100ಕ್ಕೂ ಹೆಚ್ಚು ಸಂಗೀತ ಉಪಕರಣಗಳು
* ಕಂಪ್ಯೂಟರ್‌ ಆಧರಿತ ಸಂವಾದಾತ್ಮಕ ಸಾಧನಗಳು
* ಮೂರು ಮಿನಿ ಥಿಯೇಟರ್‌
* ಸಂಗೀತ ಶಿಲ್ಪಗಳನ್ನು ಒಳಗೊಂಡ ‘ಸೌಂಡ್‌ ಗಾರ್ಡನ್‌’
* ಸಭಾಂಗಣ ಮತ್ತು ಸೆಮಿನಾರ್‌ ಹಾಲ್‌ಗಳು

**

ದೇಶದಲ್ಲಿ ಐಎಂಇ ಒಂದು ಪ್ರಖ್ಯಾತ ಕಲಾ ಕೇಂದ್ರವಾಗಿ ಬೆಳೆಯಲಿದೆ. ಮುಂದಿನ ಪೀಳಿಗೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಈ ಕೇಂದ್ರ ಪರಿಚಯಿಸಲಿದೆ.
-ಎಂ. ಆರ್. ಜಯಶಂಕರ್, ಐಎಂಇ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.