ADVERTISEMENT

‘ಶಕ್ತಿ’ ಯೋಜನೆ: ನಿತ್ಯ 30 ಲಕ್ಷ ಪ್ರಯಾಣಿಕರ ಹೆಚ್ಚಳ

ಬಸ್‌ನಲ್ಲಿ ನಿತ್ಯ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಸರಾಸರಿ 50 ಲಕ್ಷ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 19:05 IST
Last Updated 17 ಜೂನ್ 2023, 19:05 IST
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಲು ಉಂಟಾದ ನೂಕುನುಗ್ಗಲು ಉಂಟಾಗಿತ್ತು–ಸಾಂದರ್ಭಿಕ ಚಿತ್ರ
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಲು ಉಂಟಾದ ನೂಕುನುಗ್ಗಲು ಉಂಟಾಗಿತ್ತು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಇಲಾಖೆಯ ಅಧೀನದ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ನಿತ್ಯ ಪ್ರಯಾಣಿಸುವವರ ಸಂಖ್ಯೆ ಸುಮಾರು 30 ಲಕ್ಷದಷ್ಟು ಹೆಚ್ಚಳವಾಗಿದೆ.

ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿದ ಈ ಯೋಜನೆ ಜಾರಿಯಾಗುವ ಮೊದಲು ನಿತ್ಯ ಸರಾಸರಿ 84.14 ಲಕ್ಷ ಜನರು ಬಸ್‌ನಲ್ಲಿ ಸಂಚರಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ನಂತರದ ಐದು ದಿನಗಳಲ್ಲಿ ಸರಾಸರಿ 1.12 ಕೋಟಿ ಪ್ರಯಾಣಿಕರು ನಿತ್ಯವೂ ಸಂಚರಿಸಿದ್ದಾರೆ. ಅದರಲ್ಲಿ ಸರಾಸರಿ 50 ಲಕ್ಷ ಮಹಿಳಾ ಪ್ರಯಾಣಿಕರು.

ಜತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯೂ ಸ್ವಲ್ಪ ಜಾಸ್ತಿಯಾಗಿದೆ. ಮನೆಯ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಇರುವುದರಿಂದ ಅವರ ಜತೆ ಹೋಗುವ ಪುರುಷರು ಸಹ ಅನಿವಾರ್ಯವಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದರಿಂದ ಈ ಹೆಚ್ಚಳ ಕಂಡು ಬಂದಿದೆ.

ADVERTISEMENT

ಜೂನ್‌ 11ರಂದು ಮಧ್ಯಾಹ್ನ 1ರ ಬಳಿಕ ಶಕ್ತಿ ಯೋಜನೆ ಜಾರಿಯಾಗಿತ್ತು. ಮೊದಲ ದಿನ ಭಾನುವಾರ ಆಗಿದ್ದರಿಂದ ಅಂದು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.