ADVERTISEMENT

ಹಿಂಸೆ ತುಂಬುವುದು ಅಪರಾಧ: ಸಚವ ಎಚ್.ಕೆ. ಪಾಟೀಲ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:05 IST
Last Updated 2 ಅಕ್ಟೋಬರ್ 2025, 23:05 IST
   

ಬೆಂಗಳೂರು: ‘ಅಹಿಂಸೆ, ಶಾಂತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರಾಜ್ಯಸಭಾ ಸದಸ್ಯರೊಬ್ಬರು ಜನರ ರಕ್ಷಣೆಗೆ ವ್ಯಕ್ತಿಗತವಾಗಿ ಬಂದೂಕು, ಕುಡು ಗೋಲು, ಕೊಡಲಿ ಖರೀದಿಸುವಂತೆ ಕರೆ ನೀಡುತ್ತಿದ್ದಾರೆ. ಹಿಂಸೆಯನ್ನು ಪ್ರಚೋದಿ ಸುವ ಅವರ ಮಾನಸಿಕ ಸ್ಥಿತಿಯನ್ನು ಕಿತ್ತೊಗೆಯಬೇಕು. ಜನರ ಮನಸಿನಲ್ಲಿ ಹಿಂಸೆಯನ್ನು ತುಂಬುವುದು ಅಪರಾಧ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. 

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಎನ್. ದಯಾನಂದ ಅವರ ಗಾಂಧಿ ಆಂತರ್ಯ ಪುಸ್ತಕಕ್ಕೆ ‘ಜಯಲಕ್ಷ್ಮೀ ಡಾ.ಹೊ. ಶ್ರೀನಿವಾಸಯ್ಯ ದತ್ತಿ’ ಪುರಸ್ಕಾರ ಪ್ರದಾನ ಮಾಡಲಾಯಿತು.

ADVERTISEMENT

‘ಪ್ರೊ.ಜಿ.ಬಿ. ಶಿವರಾಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ರಾಜ್ಯ ಪ್ರಶಸ್ತಿ’ಯನ್ನು ಮಂಡ್ಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ. ಪ್ರಸನ್ನಕುಮಾರ್ ಹಾಗೂ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಅವರಿಗೆ ಪ್ರದಾನ ಮಾಡಲಾಯಿತು. ‘ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ’ಯನ್ನು ಮಂಡ್ಯದ ಸಚಿನ್ ಎಸ್.ಎಸ್., ಮೈಸೂರಿನ ಹರ್ಷವರ್ಧನ್, ರಾಯಚೂರಿನ ಸನಾ ಅಮ್ದಿಹಾಲ್, ಕೊಪ್ಪಳದ ಮಂಜುನಾಥ್ ಪವಾರ್ ಅವರಿಗೆ ಪ್ರದಾನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.