ADVERTISEMENT

ಮೆಟ್ರೊ: ಒಂದೇ ದಿನ ₹1.24 ಕೋಟಿ ವರಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 20:32 IST
Last Updated 16 ಆಗಸ್ಟ್ 2022, 20:32 IST
   

ಬೆಂಗಳೂರು: ಸ್ವಾತಂತ್ರ್ಯೋತ್ಸವದ ದಿನ ಮೆಟ್ರೊ ರೈಲಿನಲ್ಲಿ 8.25 ಲಕ್ಷ ಜನ ಪ್ರಯಾಣ ಮಾಡಿದ್ದು, ಒಂದೇ ದಿನ ₹1.24 ಕೋಟಿ ವರಮಾನವನ್ನು ಬಿಎಂಆರ್‌ಸಿಎಲ್ ಸಂಗ್ರಹಿಸಿದೆ.

ನೇರಳೆ ಮಾರ್ಗದಲ್ಲಿ 2.58 ಲಕ್ಷ ಜನ, ಹಸಿರು ಮಾರ್ಗದಲ್ಲಿ 4.02 ಲಕ್ಷ ಜನ ಪ್ರಯಾಣಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣವೊಂದರಿಂದಲೇ 1.65 ಲಕ್ಷ ಜನ ಪ್ರಯಾಣಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸರಾಸರಿ 5.12 ಲಕ್ಷ ಜನ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT