ADVERTISEMENT

ಬೆಂಗಳೂರು | ಇಂಡಿಯನ್ ಅಕಾಡೆಮಿ ಕಾಲೇಜು: ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 19:49 IST
Last Updated 4 ಅಕ್ಟೋಬರ್ 2025, 19:49 IST
ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಸ್ವಾಯತ್ತ ವಿದ್ಯಾಸಂಸ್ಥೆಯ 8ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು
ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಸ್ವಾಯತ್ತ ವಿದ್ಯಾಸಂಸ್ಥೆಯ 8ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು   

ಬೆಂಗಳೂರು: ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಸ್ವಾಯತ್ತ ವಿದ್ಯಾಸಂಸ್ಥೆಯ 8ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು.

ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಅಂಗಸಂಸ್ಥೆಯಾದ ‘ದಿ ಸ್ಕೂಲ್ ಆಫ್ ರಾಯ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಜಿ. ಸತೀಶ್ ರೆಡ್ಡಿ ಮಾತನಾಡಿ, ‘ವಿದ್ಯಾರ್ಥಿಗಳು, ನೀವು ಯಾವ ಕುಟುಂಬದ ವಾತಾವರಣದಿಂದ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ. ಭವಿಷ್ಯದಲ್ಲಿ ಯಾವ ಸ್ಥಾನಕ್ಕೇರುತ್ತೀರಿ ಎನ್ನುವುದು ಮುಖ್ಯವಾಗಬೇಕು. ನಿಮ್ಮಲ್ಲಿರುವ ದೊಡ್ಡ ಕನಸುಗಳೇ ಭವಿಷ್ಯವನ್ನು ರೂಪಿಸಬಲ್ಲವು’ ಎಂದು ಹೇಳಿದರು.

ADVERTISEMENT

‘ಯುವಜನಾಂಗವು ನವೋದ್ಯಮಗಳ ಕಡೆಗೆ ಹೆಚ್ಚು ಗಮನಹರಿಸಬೇಕು. ಆಗ ಸ್ವಾವಲಂಬನೆಗೆ, ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಜಗತ್ತಿನ ಪ್ರಸಿದ್ಧ ಕೌಶಲದಾರರಲ್ಲಿ ಶೇ 40ರಷ್ಟು ಮಂದಿ ಭಾರತೀಯರು’ ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ‘ಕಲಿಕೆಗೆ ಪದವಿ ಹಂತವೇ ಕೊನೆಯಲ್ಲ. ನಿರಂತರ ಓದುವುದು, ಕಲಿಯುವುದನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ತೃಪ್ತಿ ಎನಿಸಿದರೆ ಅದರ ನಂತರ ಏನನ್ನೂ ಸಾಧಿಸಲು ಆಗುವುದಿಲ್ಲ’ ಎಂದು ವಿಶ್ಲೇಷಿಸಿದರು.

320 ಪದವಿ ವಿದ್ಯಾರ್ಥಿಗಳು ಮತ್ತು 80 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು. ಬಿಬಿಎ ವಿಭಾಗದಿಂದ ಸಲ್ಮಾ ಸುಲ್ತಾನಾ, ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. ಬಯೋಟೆಕ್ನಾಲಜಿ ವಿಭಾಗದಿಂದ ವಿನಿತಾ ಪ್ರಥಮ ರ‍್ಯಾಂಕ್‌ ಪಡೆದರು.

ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ. ಸೋಮಶೇಖರ್, ಕಾರ್ಯದರ್ಶಿ ಭಾರತಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಭಾರತಿ, ಉಪ ಪ್ರಾಂಶುಪಾಲ ಮೀನಾಚಿ ಸುಂದರಂ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಟಿ. ಶ್ರೀನಿವಾಸ ರಾವ್, ಸಂಶೋಧನ ವಿಭಾಗದ ನಿರ್ದೇಶಕ ದ್ವಾರಕನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.